ಅಂತಿಮ ಮತದಾರರ ಪಟ್ಟಿಯಲ್ಲಿ ೧೯,೧೯,೦೪೮ ಮತದಾರರು

| Published : Jan 23 2024, 01:50 AM IST

ಸಾರಾಂಶ

ವಿಜಯಪುರ ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ೨೦೨೪ರ ಜನವರಿ ೨೨ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೯,೭೬,೦೭೩ ಗಂಡು, ೯,೪೨,೭೫೭ ಹೆಣ್ಣು ಹಾಗೂ ೨೧೮ ಇತರೆ ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ೨೦೨೪ರ ಜನವರಿ ೨೨ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೯,೭೬,೦೭೩ ಗಂಡು, ೯,೪೨,೭೫೭ ಹೆಣ್ಣು ಹಾಗೂ ೨೧೮ ಇತರೆ ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ೧೮,೯೯,೨೪೮ ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೧೯,೧೯,೦೪೮ ಮತದಾರರಿದ್ದು, ಒಟ್ಟು ೧೯,೮೦೦ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದರು.

೧೯,೧೯,೦೪೮ ಮತದಾರರು:

ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೧,೩೩೯ ಪುರುಷರು, ೧,೦೯,೧೬೬ ಮಹಿಳೆಯರು ಹಾಗೂ ೨೨ ಇತರೆ ಮತದಾರರು ಸೇರಿದಂತೆ ಒಟ್ಟು ೨,೨೦,೫೨೭ ಮತದಾರರಿದ್ದಾರೆ. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೩,೮೫೮ ಪುರುಷರು, ೧,೦೮,೪೫೯ ಮಹಿಳೆಯರು ಹಾಗೂ ೨೦ ಇತರೆ ಮತದಾರರು ಸೇರಿದಂತೆ ೨,೨೨,೩೩೭ ಮತದಾರರಿದ್ದಾರೆ. ೨೮-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೮,೮೮೨ ಪುರುಷರು, ೧,೦೫,೫೭೯ ಮಹಿಳೆಯರು ಹಾಗೂ ೧೫ ಇತರೆ ಮತದಾರರು ಸೇರಿದಂತೆ ಒಟ್ಟು ೨,೧೪,೪೭೬ ಮತದಾರರಿದ್ದಾರೆ.

ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೧,೬೮೪ ಪುರುಷರು, ೧,೦೭,೮೩೬ ಹೆಣ್ಣು ಹಾಗೂ ೪ ಇತರೆ ಮತದಾರರು ಸೇರಿದಂತೆ ಒಟ್ಟು ೨,೧೯,೫೨೪ ಮತದಾರರಿದ್ದಾರೆ. ೩೦-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿ ೧,೩೯,೯೭೪ ಪುರುಷರು, ೧,೪೨,೪೯೪ ಮಹಿಳೆಯರು ಹಾಗೂ ೯೩ ಇತರೆ ಮತದಾರರು ಸೇರಿದಂತೆ ಒಟ್ಟು ೨,೮೨,೫೬೧ ಮತದಾರರಿದ್ದಾರೆ. ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ ೧,೩೯,೫೮೨ ಗಂಡು, ೧,೩೨,೫೪೦ ಮಹಿಳೆಯರು ಹಾಗೂ ೧೭ ಇತರೆ ಮತದಾರರು ಸೇರಿದಂತೆ ೨,೭೨,೧೩೯ ಮತದಾರರಿದ್ದಾರೆ. ೩೨-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೨೭,೪೪೧ ಪುರುಷರು, ೧,೧೯,೫೮೩ ಮಹಿಳೆಯರು ಹಾಗೂ ೧೮ ಇತರೆ ಮತದಾರರು ಸೇರಿದಂತೆ ೨,೪೭,೦೪೨ ಮತದಾರರಿದ್ದಾರೆ ಮತ್ತು ೩೩-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೨೩,೩೧೩ ಪುರುಷರು, ೧,೧೭,೧೦೦ ಮಹಿಳೆಯರು ಹಾಗೂ ೨೯ ಇತರೆ ಮತದಾರರು ಸೇರಿದಂತೆ ಒಟ್ಟು ೨,೪೦,೪೪೨ ಮತದಾರರಿದ್ದು, ಒಟ್ಟು ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರದಲ್ಲಿ ೯,೭೬,೦೭೩ ಪುರುಷರು, ೯,೪೨,೭೫೭ ಮಹಿಳೆರು ಹಾಗೂ ೨೧೮ ಇತರೆ ಮತದಾರರು ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ.

೨೦೮೫ ಮತಗಟ್ಟೆಗಳು:

ಅಂತಿಮ ಮತದಾರರ ಪಟ್ಟಿಯನುಸಾರ ವಿಜಯಪುರ ಜಿಲ್ಲೆಯಲ್ಲಿ ೨೦೮೫ ಮತಗಟ್ಟೆಗಳಿದ್ದು, ವಿಧಾನಸಭಾವಾರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೨೪೫ ಮತಗಟ್ಟೆಗಳು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೫೨ ಮತಗಟ್ಟೆಗಳು, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೨೩೦ ಮತಗಟ್ಟೆಗಳಿವೆ. ಬಬಲೇಶ್ವರ ಮತಕ್ಷೇತ್ರದಲ್ಲಿ ೨೪೩ ಮತಗಟ್ಟೆಗಳು, ಬಿಜಾಪುರ ನಗರ ಮತಕ್ಷೇತ್ರದಲ್ಲಿ ೨೮೨ ಮತಗಟ್ಟೆಗಳಿವೆ. ನಾಗಠಾಣ ಮತಕ್ಷೇತ್ರದಲ್ಲಿ ೨೯೭, ಇಂಡಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳಿದ್ದು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ೨೦೮೫ ಮತಗಟ್ಟೆಗಳು ಅಂತಿಮವಾಗಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ನಿರಂತರವಾಗಿರುವುದರಿಂದ ಅರ್ಹ ಸಾರ್ವಜನಿಕರು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ವೋಟರ್ ಹೆಲ್ಫ್‌ಲೈನ್ ಮೊಬೈಲ್ ಆ್ಯಪ್ ಮೂಲಕವಾಗಲಿ, ವಿಎಸ್‌ಪಿ ಪೋರ್ಟಲ್ ಹಾಗೂ www.ceo.karnataka.gov.in ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.