ರಾಮನಗರ: ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಓಡಿಸ್ಸಾ ಮೂಲದ ಕೆಂದುಜಾರ್ ಜಿಲ್ಲೆಯ ಖಲಿಮೊತ ಗ್ರಾಮದ ಶುಭಾಂಕರ್ ಕುಮಾರ್ ಪಾತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಈತನಿಂದ 4 ಲಕ್ಷ ರು. ಮೌಲ್ಯದ 19 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಜೂನ್ 16ರಂದು ಚೆಕ್ಕೆಲ್ಲೂರು ಬಳಿ ಇರುವ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸಗಾರರು ಕ್ಯಾಬಿನ್‌ನಲ್ಲಿಟ್ಟಿದ್ದ, ಮೊಬೈಲ್ ಪೋನ್‌ಗಳನ್ನು ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ 4 ಲಕ್ಷ ಮೌಲ್ಯದ 19 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.18ಕೆಆರ್ ಎಂಎನ್ 5.ಜೆಪಿಜಿ

ತಾವರೆಕೆರೆ ಠಾಣೆ ಪೊಲೀಸರು ಕಳ್ಳನಿಂದ ವಶಪಡಿಸಿಕೊಂಡಿರುವ ಮೊಬೈಲ್‌ಗಳು.