ಮಾಸ್ಟರ್ ಕರಾಟೆ ತಂಡಕ್ಕೆ 19 ಬಹುಮಾನ

| Published : Feb 18 2025, 12:33 AM IST

ಸಾರಾಂಶ

ಕೊಳ್ಳೇಗಾಲದ ಮಾಸ್ಚರ್ ಕರಾಟೆ ಅಕಾಮೆಡಿಯ 12 ವಿದ್ಯಾರ್ಥಿಗಳು ಮೈಸೂರಿನಲ್ಲಿ ಭಾನುವಾರ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 19 ಬಹುಮಾನಗಳಿಸಿ ಸಾಧನೆಗೈದಿದ್ದಾರೆ. ತರಬೇತುದಾರ ನಂಜುಂಡಸ್ವಾಮಿ, ಆಯೋಜಕ ಸುಧಾರಕರ್ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮೈಸೂರಿನಲ್ಲಿ ಇಸ್ಕಾಂ ಮೈಸೂರು ಕರಾಟೆ ಚಾಂಪಿಯನ್ ತಂಡ ನಡೆಸಿದ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಳ್ಳೇಗಾಲದ ಮಾಸ್ಟರ್ ಕರಾಟೆ ಅಕಾಡೆಮಿಯ 12 ವಿದ್ಯಾರ್ಥಿಗಳು ಪಾಲ್ಗೊಂಡು 19 ಬಹುಮಾನಗಳಿಸಿ ಸಾಧನೆಗೈದಿದ್ದಾರೆ.ಭಾನುವಾರ ಸಂಜೆ ಮೈಸೂರಿನ ಟೆರಿಸನ್ ಒಳಾಂಗಣ ಕ್ರೀಡಾಂಗಣದಲ್ಲಿ ಇಸ್ಕಾಂ ತಂಡ ಆಯೋಜಿಸಿದ್ದ ಚಾಂಪಿಯನ್‌ ಶಿಫ್ ಸ್ಪರ್ಧೆಯಲ್ಲಿ ಸನ್ನಿಧಿ ಕಟ ಮತ್ತು ಕುಮಿತೆ ಎರಡು ವಿಭಾಗದಲ್ಲೂ ಪ್ರಥಮ ಸ್ಥಾನ, ಲಿಖಿತ್ ಜೋಗಿ ಕಟ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತೆ ವಿಭಾಗದಲ್ಲಿ ದ್ವಿತೀಯ ಹಾಗೂ ನಕುಲ್ ಕಟ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಉಳಿದಂತೆ ಆರ್ಯ, ಮನೋಜ್ ಮತ್ತು ಕೃತಿಕ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ. ಭೃತ್ವಕಣ್ವ ಕಟ ವಿಭಾಗದಲ್ಲಿ ದ್ವಿತೀಯ, ಧನನ್ಯ ಕಟ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ, ಧನ್ವಿನ್ ಎಂಬ ವಿದ್ಯಾರ್ಥಿ ಕಟ ಮತ್ತು ಕುಮಿತೆ ಎರಡರಲ್ಲೂ ತೃತೀಯ, ಚಿರಾಗ್ ಕಟ ಮತ್ತು ಕುಮಿತೆ ಎರಡರಲ್ಲೂ ತೃತೀಯ, ಶ್ರದ್ಧ ಕಟ ವಿಭಾಗದಲ್ಲಿ ದ್ವಿತೀಯ, ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನಕ್ಕೆ ಭಾಜನರಾಗಿ ಬಹುಮಾನದ ಜೊತೆ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆ ಆಯೋಜಕರಾದ ಸುಧಾಕರ್ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರ ನಂಜುಂಡಸ್ವಾಮಿ, ಕೋಚ್ ಪ್ರತ್ಯೂಷ್ ಇನ್ನಿತರರಿಗೆ ಅಭಿನಂದಿಸಿದರು.