ಸಾರಾಂಶ
ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಬೇಕೆಂದು ಕಳೆದೆರಡು ದಶಕಗಳಿಂದಲೂ ಇಲ್ಲಿನ ನಿವಾಸಿಗಳು ಕೇಳುತ್ತಿದ್ದರು
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಅಂಗನವಾಡಿ ಕೇಂದ್ರಗಳು ಬಡವರು ಮತ್ತು ಮಧ್ಯಮ ವರ್ಗಗಳ ಜನರ ಮಕ್ಕಳಿಗೆ ಪೋಷಕಾಂಶಗಳಯುಕ್ತ ಪೌಷ್ಟಿಕ ಆಹಾರ ಸಿಗಲು ಹಾಗೂ ಮಕ್ಕಳ ದೈಹಿಕ ಬೆಳವಣಿಗೆ ಸಹಕಾರಿಯಾಗಿವೆ ಎಂದು ಸಂಸದ ಸುನಿಲ್ ಬೋಸ್ ಹೇಳಿದರು.ಪಟ್ಟಣದ 19ನೇ ವಾರ್ಡಿನ ವಿನಾಯಕ ಕಾಲೋನಿಯಲ್ಲಿ ಬುಧವಾರ 20 ಲಕ್ಷ ರು. ವೆಚ್ಚದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಬೇಕೆಂದು ಕಳೆದೆರಡು ದಶಕಗಳಿಂದಲೂ ಇಲ್ಲಿನ ನಿವಾಸಿಗಳು ಕೇಳುತ್ತಿದ್ದರು. ಕೊನೆಗೂ 20 ಲಕ್ಷ ರು. ಗಳ ವೆಚ್ಚದ ಸುಸಜ್ಜಿತವಾದ ಅಂಗನವಾಡಿ ಕಟ್ಟಡ ನಿರ್ಮಾಣವಾಗುವ ಮೂಲಕ ಕನಸು ಸಾಕಾರಗೊಳ್ಳುತ್ತಿದೆ ಎಂದರು.ಪುರಸಭೆ ಸದಸ್ಯರಾದ ಆರ್. ನಾಗರಾಜು, ಎಂ. ರಾಘವೇಂದ್ರ, ಪುಳ್ಳಾರಿ ಮಾದೇಶ್, ರಾಜು, ಜಿಪಂ ಮಾಜಿ ಸದಸ್ಯೆ ಎಂ. ಸುಧಾ ಮಹದೇವಯ್ಯ, ಲಕ್ಷ್ಮೀನಾರಾಯಣ, ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ಕೆಆರ್.ಐಡಿಎಲ್ ಎಇಇ ಎಸ್. ಅರ್ಚನಾ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಉಮೇಶ್, ಎಂ. ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯರಾದ ಎಸ್. ಗಣೇಶ್, ರಾಮಲಿಂಗಯ್ಯ ಇದ್ದರು.