ಸಾರಾಂಶ
ದೇಶದ ಭವಿಷ್ಯ ರೂಪಿಸಬೇಕಾದ ಯುವ ಜನಾಂಗ ಮಾದಕ ವಸ್ತುಗಳ ದಾಸರಾಗಿ ಬದಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಜಗದೀಶ್ ವಿಷಾದಿಸಿದರು. ಕನಕಪುರದಲ್ಲಿ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
-ಮಾದಕ ವಸ್ತು, ವ್ಯಸನಗಳ ಪರಿಣಾಮ ಕುರಿತು ವಿಶೇಷ ಉಪನ್ಯಾಸ ಕನ್ನಡಪ್ರಭ ವಾರ್ತೆ ಕನಕಪುರ
ದೇಶದ ಭವಿಷ್ಯ ರೂಪಿಸಬೇಕಾದ ಯುವ ಜನಾಂಗ ಮಾದಕ ವಸ್ತುಗಳ ದಾಸರಾಗಿ ಬದಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಜಗದೀಶ್ ವಿಷಾದಿಸಿದರು.ನಗರದ ರೂರಲ್ ಪದವಿ ಕಾಲೇಜಿನಲ್ಲಿ ಎಕ್ಯೂಎಸಿ, ಎನ್ಎಸ್ಎಸ್ ಹಾಗೂ ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಸಹಯೋಗದಲ್ಲಿ ಯುವಜನಾಂಗದ ಮೇಲೆ ಮಾದಕ ವಸ್ತು, ವ್ಯಸನಗಳ ಪರಿಣಾಮ ಕುರಿತ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯುವಶಕ್ತಿಯೇ ಈ ದೇಶದ ಸಂಪತ್ತು. ಯುವಕರು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ದೇಶದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹೇಳಿದರು.
ಪ್ರೊ. ನಂಜುಂಡಸ್ವಾಮಿ ಮಾತನಾಡಿ, ಮಾದಕ ವ್ಯಸನಕ್ಕೆ ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರೂ ದಾಸರಾಗಿರುವುದು ವಿಷಾದಕರ. ಮೊಬೈಲ್ ಕೂಡ ಇತ್ತೀಚಿನ ದಿನಗಳಲ್ಲಿ ದೊಡ್ಡ ವ್ಯಸನವಾಗಿದೆ. ಕೃತಕ ಸಂಭ್ರಮಕ್ಕೆ ಮಾದಕ ವಸ್ತುಗಳನ್ನು ಯುವಜನತೆ ಮೈಗೂಡಿಸಿಕೊಂಡಿದ್ದು, ಪ್ರಪಂಚವನ್ನು ಆಲಿಸದ, ಅನುಭವಿಸದ ಸ್ಥಿತಿಗೆ ತಲುಪಿದ್ದಾರೆ. ಯುವಜನತೆ ಆದರ್ಶಗಳನ್ನು ಅಳವಡಿಸಿಕೊಂಡು ವ್ಯಸನಗಳಿಂದ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.ಎನ್‌ಸಿಸಿ ಅಧಿಕಾರಿ(ಲೆಪ್ಟಿನೆಂಟ್) ವಿಜಯೇಂದ್ರ, ಉಪ ಪ್ರಾಂಶುಪಾಲ ಪ್ರೊ.ದೇವರಾಜು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.