ಸಾರಾಂಶ
ಸಿಂದಗಿ: ಪಟ್ಟಣದ ಅನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ನರ್ಸರಿ ಓದುತ್ತಿರುವ 2 ವರ್ಷ 10 ತಿಂಗಳದ ವರಣ್ಯಾ ಗುರುರಾಜ ಕುಲಕರ್ಣಿ ಕೇವಲ 53 ಸೆಕಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರುಗಳನ್ನು ಪಟ್ ಅಂತಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಬಾಲಕಿಗೆ ಇದೀಗ ನೋಬೆಲ್ ವರ್ಡ್ ರೆಕಾರ್ಡ್ ಬುಕ್‌ಗೆ ಸೇರ್ಪಡೆಯಾಗಿದ್ದಾಳೆ. ಈ ಕುವರಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದ ನಾನ್ ಒಲಂಪಿಕ್ಸ್ ಟೈಮ್ ಯೋಜನೆ ಮಾಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದಳು.
ಸಿಂದಗಿ: ಪಟ್ಟಣದ ಅನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ನರ್ಸರಿ ಓದುತ್ತಿರುವ 2 ವರ್ಷ 10 ತಿಂಗಳದ ವರಣ್ಯಾ ಗುರುರಾಜ ಕುಲಕರ್ಣಿ ಕೇವಲ 53 ಸೆಕಂಡ್‌ಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರುಗಳನ್ನು ಪಟ್ ಅಂತಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಬಾಲಕಿಗೆ ಇದೀಗ ನೋಬೆಲ್ ವರ್ಡ್ ರೆಕಾರ್ಡ್ ಬುಕ್‌ಗೆ ಸೇರ್ಪಡೆಯಾಗಿದ್ದಾಳೆ. ಈ ಕುವರಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದ ನಾನ್ ಒಲಂಪಿಕ್ಸ್ ಟೈಮ್ ಯೋಜನೆ ಮಾಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದಳು. ಸಿಂದಗಿಯ ಜವಳಿ ವರ್ತಕ ಪಂಡಿತ್ ರಾವ್ ಕುಲಕರ್ಣಿ ಅವರ ಮೊಮ್ಮಗಳು. ಈ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.