ಸಾರಾಂಶ
ಖಾಲಿ ಹುದ್ದೆಗಳಿಂದ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮೇಲೆಯೂ ಒತ್ತಡ ಉಂಟಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. 60 ವರ್ಷ ಪೂರ್ಣಗೊಳಿಸದೇ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ.
ಧಾರವಾಡ:
ರಾಜ್ಯದ ವಿವಿಧ ಕಚೇರಿಗಳಲ್ಲಿ ಕಳೆದ ಒಂದು ದಶಕಗಳಿಂದ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಾಗಿವೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ದಿನನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ಹಂತ-ಹಂತವಾಗಿ ಹುದ್ದೆಗಳನ್ನು ತುಂಬಿಕೊಳ್ಳಲು ಮುಖ್ಯಮಂತ್ರಿಗೆ ವಿಧಾನ ಪರಿಷತ್ತ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದರು.ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ವತಿಯಿಂದ ಇಲ್ಲಿಯ ಮಿನಿ ವಿಧಾನಸೌಧದ ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಹಮ್ಮಿಕೊಂಡ ನಿವೃತ್ತರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಲಿ ಹುದ್ದೆಗಳಿಂದ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮೇಲೆಯೂ ಒತ್ತಡ ಉಂಟಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. 60 ವರ್ಷ ಪೂರ್ಣಗೊಳಿಸದೇ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಉಂಟಾಗದಂತೆ ಮತ್ತು ನೌಕರರ ಒತ್ತಡ ಕಡಿಮೆ ಮಾಡಲು ಸರ್ಕಾರ 32 ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕ್ರಮವಾಗಿ ತುಂಬಿಕೊಳ್ಳಲು ಕ್ರಮಕೈಗೊಳ್ಳಬೇಕೆಂದು ಸಂಕನೂರ ಮುಖ್ಯಮಂತ್ರಿಗೆ ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಮೋಹನ ಸಿದ್ದಾಂತಿ, ಮಲ್ಲಿಕಾರ್ಜುನ ಚಿಕ್ಕಮಠ, ಆನಂದ ಕುಲಕರ್ಣಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯರಾದ ಡಾ. ಬಿ.ಜಿ. ಬಿರಾದಾರ, ಆಕಾಶವಾಣಿ ಡಾ. ಶಶಿಧರ ನರೇಂದ್ರ, ಇಂಜಿನಿಯರ್ ಮನೋಹರ ವಾಲಗದ. ಅಂಜುಮನ್ ಕಾಲೇಜಿನ ಪ್ರಾಚಾರ್ಯರಾದ ಮರ್ದನ ಅಲಿ, ಉಪನ್ಯಾಸಕರಾದ ಶಿವಾಜಿ ಚವ್ಹಾಣ, ಉಮೇಶ ಮಿರಜಕರ, ಸಿಬ್ಬಂದಿ ಉದಯಕುಮಾರ ಕಾಳೆ, ನಿವೃತ್ತ ಶಿಕ್ಷಕರಾದ ಎಸ್.ಬಿ. ಕೇಸರಿ, ಮತ್ತು ಅಖಿಲ್ ಖಾಜಿ ಅವರನ್ನು ಸನ್ಮನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಖಜಾಂಚಿ ಡಾ. ಬಿ.ಆರ್. ರಾಠೋಡ ವಂದಿಸಿದರು. ಮನೋಹರ ವಾಲಗದ ಪ್ರಾರ್ಥಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್, ನಿವೃತ್ತ ಉಪನ್ಯಾಸಕ ಕೆ..ಜಿ. ದೇವರಮನಿ, ಡಾ. ಬಸವರಾಜ ಅಸುಂಡಿ, ನಾಗೇಂದ್ರ ಶಾವಿ, ಡಾ. ಪಿ.ಆರ್. ಯಾವಗಲ್, ಪಿರೋಜ ಗುಡೇನಕಟ್ಟಿ ಮತ್ತಿತರರು ಇದ್ದರು.