2.55 ಲಕ್ಷ ರು. ಮೌಲ್ಯದ 9 ಬೈಕ್ ಕಳ್ಳನ ಬಂಧನ

| Published : Oct 30 2024, 01:32 AM IST

ಸಾರಾಂಶ

2.55 lakh Rs. Bike thief worth 9 arrested

-ಚನ್ನಾಪುರ ಗ್ರಾಮದ ಕೆ. ಅರುಣ ಸಡ್ಡೆ ಬಿನ್ ಲೇಟ್ ಕೆಂಚಪ್ಪನನ್ನು ಬಂಧಿಸಿದ ಪೊಲೀಸರು

ಕನ್ನಡಪ್ರಭ ವಾರ್ತೆ ಕಡೂರು

ದ್ವಿಚಕ್ರ ವಾಹನಗಳ ಕಳವು ಮಾಡುತಿದ್ದ ಆರೋಪಿಯನ್ನು ಬೈಕ್‌ ಸಮೇತ ಪೋಲೀಸರು ಬಂಧಿಸಿದ್ದಾರೆ. ಬೈಕ್‌ ಕಳವು ಪ್ರ್ರಕರಣ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಡಾ.ವಿಕ್ರಂ ಅಮಟೆ, ಪೊಲೀಸ್ ಅಧೀಕ್ಷಕರು ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮತ್ತು ರಫೀಕ್ ಎಂ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ, ಕಡೂರು ಠಾಣಾ ಪಿಎಸೈ ಹಾಗೂ ಸಿಬ್ಬಂದಿ ಆರೋಪಿಯ ಪತ್ತೆಗೆ ವೈಜ್ಞಾನಿಕ ಹಾಗೂ ವಿವಿಧ ರೀತಿಯಲ್ಲಿ ಮಾಹಿತಿ ಪಡೆದು ಚನ್ನಾಪುರ ಗ್ರಾಮದ ಕೆ. ಅರುಣ ಸಡ್ಡೆ ಬಿನ್ ಲೇಟ್ ಕೆಂಚಪ್ಪ ಎಂಬಾತನನ್ನು ಬಂಧಿಸಿದ್ದಾರೆ.

ಕೂಲಂಕುಶ ವಿಚಾರಣೆ ನಡೆಸಿದ್ದು, ಕಡೂರು ಟೌನ್ ಹಾಗೂ ಸುತ್ತ ಗ್ರಾಮಗಳಲ್ಲಿ ಆರೋಪಿ ಅರುಣ ಕಳ್ಳತನ ಮಾಡಿದ್ದ 2.55 ಲಕ್ಷ ರು. ಮೌಲ್ಯದ 9 ಬೈಕ್ ಗಳನ್ನು ವಶಪಡಿಸಿಕೊಂಡು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರಕರಣ ಭೇದಿಸಿದ ತನಿಖಾ ತಂಡದಲ್ಲಿ ಕಡೂರು ಠಾಣೆಯ ಪಿಎಸೈ ಪವನ್ ಕುಮಾರ್ ಸಿ.ಸಿ, ಅಜರುದ್ದೀನ್, ಎಸ್,ಧನಂಜಯ, ಲ್ಲೀಲಾವತಿ ಹಾಗೂ ಸಿಬ್ಬಂದಿ ವೇದಮೂರ್ತಿ. ಮಂಜುನಾಥಸ್ವಾಮಿ, ಕುಚೇಲ, ಮಹಮದ್ ರಿಯಾಜ್, ಧನಪಾಲನಾಯ್ಕ, ಪರಮೇಶ ನಾಯ್ಕ, ಸ್ವಾಮಿ ಎ.ಒ., ದೇವರಾಜ್, ಬೀರೇಶ, ಮಧು, ಹರೀಶ್, ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ನಯಾಜ್ ಅಜಂ, ಅಬ್ದುಲ್ ರಬ್ಬಾನಿ ಇದ್ದರು, ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.

----

29ಕೆಕೆಡಿಯು5. ವಶಪಡಿಸಿಕೊಂಡಿರುವ ಬೈಕ್‌ಗಳು