ತಾಲೂಕಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳುವ ಮೂಲಕ ಮಾದರಿ ತಾಲೂಕು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಅಣ್ಣಿಗೇರಿ:
ತಾಲೂಕಿನ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ₹ 2 ಕೋಟಿ ವಿಶೇಷ ಅನುದಾನ ಮೀಸಲಿರಿಸಲಾಗಿದೆ. ಕೆಆರ್‌ಡಿಎಲ್ ವತಿಯಿಂದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ಪಟ್ಟಣದ ವಿವಿಧ ರಸ್ತೆ, ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳುವ ಮೂಲಕ ಮಾದರಿ ತಾಲೂಕು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತರುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಪಟ್ಟಣದ 23ನೇ ವಾರ್ಡಿನ ಚರಂಡಿ, ರಸ್ತೆ ಅಭಿವೃದ್ಧಿ, 4ನೇ ವಾರ್ಡಿನ ಉದಯ ನಗರ, ಮೇಟಿಯವರ ಪ್ಲಾಟ್, ಜಾಡಗೇರಿ ಓಣಿ ಮತ್ತು 19ನೇ ವಾರ್ಡಿನ ಕುರಬಗೇರಿ ಓಣಿಯಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಉಳಿದ ವಾರ್ಡ್‌ಗಳಿಗೆ ಶೀಘ್ರದಲ್ಲಿಯೇ ಪೂಜೆಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಈ ವೇಳೆ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗಪ್ಪ ದಳವಾಯಿ, ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರ, ಸದಸ್ಯರಾದ ಈಶ್ವರ ಕಾಳಪ್ಪನವರ, ಬಾಬಾಜಾನ ಮುಲ್ಲಾ, ಮುದಕಣ್ಣ ಕೊರವರ, ಸಿ.ಜಿ. ನಾವಳ್ಳಿ, ಇಮಾಮ್ ಧಾರವಾನ, ಶಂಕ್ರಣ್ಣ ಕುರಿ, ರೈಹಿಮಾನಸಾಬ ಹೊರಗಿನಮನಿ, ಬಸವಣ್ಣವ್ವ ದಿಡ್ಡಿ ಸೇರಿದಂತೆ ಹಲವರಿದ್ದರು.