ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕನ್ನಡದ ಕ್ರಿಯಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸಿ ಚರ್ಚಿಸುವ ಉದ್ದೇಶದ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಈ ತಿಂಗಳ 8 ಮತ್ತು 9 ರಂದು ಬೆಂಗಳೂರಿನ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಏರ್ಪಾಟಾಗಿದೆ ಎಂದು ಲೇಖಕಿ ರಮಾಕುಮಾರಿ ತಿಳಿಸಿದರು. ಸಮಾಜಮುಖಿ ಬಳಗದಿಂದ ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವು ಕ್ರಿಯಾಶೀಲ ಬರಹಗಾರರು ಹಾಗೂ ವಿಮರ್ಶಾತ್ಮಕ ಚಿಂತಕರನ್ನುಒಟ್ಟುಗೂಡಿಸುವ ವೇದಿಕೆಯಾಗಿದೆ . ಕನ್ನಡ ಬರಹಗಾರರು, ಚಿಂತಕರೊಂದಿಗೆ ಸಾಹಿತ್ಯ ಹಾಗೂ ಸಮಾಜದ ವಿಷಯಗಳ ಕುರಿತುಚರ್ಚೆ ನಡೆಯಲಿದೆಎಂದು ಹೇಳಿದರು. ಪ್ರಧಾನ ವೇದಿಕೆ ಹಾಗೂ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ವಿವಿಧ ವಿಚಾರಗಳ ಗೋಷ್ಠಿಗಳು ನಡೆಯಲಿವೆ. ಇದೇ 8 ರಂದು ಬೆಳಿಗ್ಗೆ 11.30ಕ್ಕೆ ಪ್ರಧಾನ ವೇದಿಕೆಯಲ್ಲಿ ಹಂ.ಪ.ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಹೆಚ್.ಎಸ್.ಶಿವಪ್ರಕಾಶ್ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು. ನಂತರ ವಿವಿಧ ವೇದಿಕೆಗಳಲ್ಲಿ ಹೆಸರಾಂತ ಬರಹಗಾರರು, ಸಾಹಿತ್ಯಚಿಂತಕರು ಒಳಗೊಂಡ ನಾನಾ ವಿಷಯಗಳ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಲೇಖಕ ಲಕ್ಷ್ಮಿಕಾಂತರಾಜೇಅರಸ್ ಮಾತನಾಡಿ ಹೊಸ ಬರಹಗಾರರಿಗೆ ನೆರವಾಗುವಂತಹ ಬರವಣಿಗೆ ಕಾರ್ಯಾಗಾರ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಸಾಹಿಸ್ಯಾಸಕ್ತರು, ವಿದ್ಯಾರ್ಥಿಗಳು ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಸಾಹಿತಿ ಮಿರ್ಜಾ ಬಷೀರ್ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತ ವಿಮರ್ಶೆ, ಕನ್ನಡ ಸಾಹಿತ್ಯಕ್ಕೆಇಂದು ಎದುರಾಗಿರುವ ಸಮಸ್ಯೆ, ಸವಾಲುಗಳ ಬಗ್ಗೆ ಹಾಗೂ ಮುಂದಿನ ಶತಮಾನಕ್ಕೆ ತೆಗೆದುಕೊಂಡು ಹೋಗಲು ಕನ್ನಡವನ್ನು ಸಜ್ಜುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಚರ್ಚೆ ಸಮ್ಮೇಳನದಲ್ಲಿ ನಡೆಯಲಿದೆ ಎಂದರು.;Resize=(128,128))
;Resize=(128,128))