ಸಾರಾಂಶ
ಲಿಂಗದಹಳ್ಳಿ ಠಾಣೆಯಿಂದ ಅಮಾನತುಗೊಂಡಿದ್ದ ಕಾನ್‌ಸ್ಟೆಬಲ್ ಸಿದ್ಧೇಶ್, ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದ ಹೆಡ್‌ಕಾನ್‌ಸ್ಟೆಬಲ್ ಉಮಾಶಂಕರ್ ಕೊಪ್ಪ ಠಾಣೆಗೆ 6 ತಿಂಗಳ ಹಿಂದೆ ವರ್ಗಾವಣೆ ಗೊಂಡಿದ್ದರು. ಕೊಪ್ಪಕ್ಕೆ ಬಂದ ಮೇಲೂ ಹಳೆಚಾಳಿಯನ್ನೆ ಮುಂದುವರೆಸಿ ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ನ್ನು ಶುಕ್ರವಾರ ರಾತ್ರಿ ಅಮಾನತು ಗೊಳಿಸಲಾಗಿದೆ
ವಸೂಲಿ ದಂಧೆ- ದುರ್ವರ್ತನೆಗೆ ಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಎರಡು ಪ್ರತ್ಯೇಕ ಪ್ರಕರಣದಲ್ಲಿ ಕೊಪ್ಪ ಪೊಲೀಸ್ ಠಾಣೆ ಓರ್ವ ಕಾನ್‌ಸ್ಟೆಬಲ್, ಮತ್ತೋರ್ವ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರು ಅಮಾನತುಗೊಂಡಿದ್ದಾರೆ.
ಲಿಂಗದಹಳ್ಳಿ ಠಾಣೆಯಿಂದ ಅಮಾನತುಗೊಂಡಿದ್ದ ಕಾನ್‌ಸ್ಟೆಬಲ್ ಸಿದ್ಧೇಶ್, ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದ ಹೆಡ್‌ಕಾನ್‌ಸ್ಟೆಬಲ್ ಉಮಾಶಂಕರ್ ಕೊಪ್ಪ ಠಾಣೆಗೆ 6 ತಿಂಗಳ ಹಿಂದೆ ವರ್ಗಾವಣೆ ಗೊಂಡಿದ್ದರು. ಕೊಪ್ಪಕ್ಕೆ ಬಂದ ಮೇಲೂ ಹಳೆಚಾಳಿಯನ್ನೆ ಮುಂದುವರೆಸಿ ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ನ್ನು ಶುಕ್ರವಾರ ರಾತ್ರಿ ಅಮಾನತು ಗೊಳಿಸಲಾಗಿದೆ.ಸಿದ್ದೇಶ್ ಹಳೇ ಚಾಳಿಯಿಂದ ಜನರಿಂದ ವಸೂಲಿ ದಂಧೆ ನಡೆಸುತ್ತಿದ್ದರು. ಉಮಾಶಂಕರ್ ಮದ್ಯಸೇವಿಸಿ ರೌಡಿಶೀಟರ್‌ಗಳ ಜೊತೆ ಸೇರಿ ಗುಂಪು ಗಲಾಟೆಗೆ ಕುಮ್ಮಕ್ಕು ನೀಡುತ್ತಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಕೌಶಿಕ್ ಬಿ.ಸಿ.ಯವರು ನೀಡಿದ ವರದಿ ಆಧರಿಸಿ ಮೇಲಾಧಿಕಾರಿಗಳು ಇವರಿಬ್ಬರನ್ನು ಅಮಾನತು ಗೊಳಿಸಿ ಆದೇಶಿಸಿದ್ದಾರೆ.
ಸಾರ್ವಜನಿಕರೇ ಆಗಲಿ, ಪೊಲೀಸರೇ ಆಗಲಿ ಸಮಾಜದಲ್ಲಿ ಶಾಂತಿ ಕದಡುವಂತೆ ವರ್ತಿಸಿದ್ದಲ್ಲಿ ಶಿಕ್ಷೆ ಗೊಳಗಾಗಲಿದ್ದಾರೆ ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ. ಮದ್ಯಸೇವನೆ ಮಾಡಿ ಜನರ ನೆಮ್ಮದಿ ಕೆಡಿಸುವುದು, ಬೆದರಿಸಿ ಹಣ ವಸೂಲಿ ಮಾಡುವುದು ಸಮಾಜದ ನೆಮ್ಮದಿ ಕೆಡಿಸುವುದು ಗೌರವ ತರುವ ಕೆಲಸವಲ್ಲ. ಈ ರೀತಿ ತಪ್ಪುಗಳು ನಡೆದಲ್ಲಿ ಸಾರ್ವಜನಿಕರು ನೇರವಾಗಿ ಕೊಪ್ಪ ಠಾಣೆಗೆ ಬಂದು ದೂರು ನೀಡಿದಲ್ಲಿ ಮುಂದೆ ಇಂತಹ ಪ್ರಕರಣ ನಡೆಯದಂತೆ ಕಡಿವಾಣ ಹಾಕಲು ಸಹಾಯಕವಾಗಲಿದೆ ಎಂದು ಪಿಎಸ್‌ಐ ಕೌಶಿಕ್ ತಿಳಿಸಿದ್ದಾರೆ.