ಇಂಡಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಎರಡು ಸರಕು ಸಾಗಣೆ ವಾಹನ ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಒಂದು ವಾಹನದಲ್ಲಿ 37 ಚೀಲ, ಇನ್ನೊಂದರಲ್ಲಿ 94 ಚೀಲ ಅಕ್ಕಿ ಇದೆ. ಯಾವುದೇ ಅನುಮತಿ ಇಲ್ಲದೆ ಅಶೋಕ ಲೇಲ್ಯಾಂಡ್ ಕಂಪನಿಯ ವಾಹನದಲ್ಲಿ 37 ಚೀಲಗಳಲ್ಲಿ ಸುಮಾರು 1510 ಕೆಜಿ ತೂಕದ ₹42,290 ಮೌಲ್ಯದ ಅಕ್ಕಿ ಸಾಗಿಸುತ್ತಿದ್ದ ಚಾಲಕ ಶಕೀಲ ನದಾಪ ಎಂಬಾತನನ್ನು ಚಿಕ್ಕಬೇವನೂರ ರಸ್ತೆಯಲ್ಲಿ ಬಂಧಿಸಿದ್ದಾರೆ. ಭಾರತ ಬೆಂಜ್ ಕಂಪನಿಯ ವಾಹನದಲ್ಲಿ 94 ಚೀಲದಲ್ಲಿ 4270 ಕೆಜಿ ತೂಕದ ₹1,19,560 ಮೌಲ್ಯದ ಅಕ್ಕಿ ಸಂಗ್ರಹಿಸಿಕೊಂಡು ಸಾಗಿಸುತ್ತಿದ್ದ ಚಾಲಕನು ವಾಹನವನ್ನು ಇಂಡಿ ಕೆರೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ 2 ವಾಹನಗಳು ಜಪ್ತಿ
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಎರಡು ಸರಕು ಸಾಗಣೆ ವಾಹನ ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.