ಶಕ್ತಿ ಯೋಜನೆಯಡಿ ಹೊಸನಗರ ತಾಲೂಕಿಗೆ 20 ಸರ್ಕಾರಿ ಬಸ್

| Published : Feb 11 2024, 01:49 AM IST

ಸಾರಾಂಶ

ಗ್ಯಾರಂಟಿ ಯೋಜನೆಯಲ್ಲಿ ಮಧ್ಯವರ್ತಿ, ಏಜೆನ್ಸಿಗಳ ಹಾವಳಿ ಇಲ್ಲ. ನೇರವಾಗಿ ಫಲಾನುಭವಿಗಳಿಗೆ ದೊರೆಯುತ್ತಿದೆ. ತಾಲೂಕಿಗೆ ಶಕ್ತಿ ಯೋಜನೆಯಡಿ 20 ಬಸ್ಸುಗಳ ಸೌಲಭ್ಯ ಕಲ್ಪಿಸಲಾಗುವುದು. ಅರ್ಹರಿಗೆ ಸರ್ಕಾರವು 5 ಗ್ಯಾರಂಟಿ ಯೋಜನೆಗಾಗಿ ₹58 ಕೋಟಿ ಸಾವಿರ ವೆಚ್ಚ ಮಾಡಲಿದೆ. ದೇಶದಲ್ಲಿ ಇದು ಅತಿ ದೊಡ್ಡ ಯೋಜನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೊಸನಗರದಲ್ಲಿ ಹೇಳಿದ್ದಾರೆ.

ಹೊಸನಗರ: ಗ್ಯಾರಂಟಿ ಯೋಜನೆಯಲ್ಲಿ ಮಧ್ಯವರ್ತಿ, ಏಜೆನ್ಸಿಗಳ ಹಾವಳಿ ಇಲ್ಲ. ನೇರವಾಗಿ ಫಲಾನುಭವಿಗಳಿಗೆ ದೊರೆಯುತ್ತಿದೆ. ತಾಲೂಕಿಗೆ ಶಕ್ತಿ ಯೋಜನೆಯಡಿ 20 ಬಸ್ಸುಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹರಿಗೆ ಸರ್ಕಾರವು 5 ಗ್ಯಾರಂಟಿ ಯೋಜನೆಗಾಗಿ ₹58 ಕೋಟಿ ಸಾವಿರ ವೆಚ್ಚ ಮಾಡಲಿದೆ. ದೇಶದಲ್ಲಿ ಇದು ಅತಿ ದೊಡ್ಡ ಯೋಜನೆ ಎಂದರು.

ಸರ್ಕಾರಿ ಬಸ್‌ಗಳ ಸಂಚಾರ ವಿರಳವಾದ ಕಾರಣ ಶಕ್ತಿ ಯೋಜನೆ ಹೊಸನಗರದ ತಾಲೂಕಿನ ಮಹಿಳೆಯರಿಗೆ ತಲುಪುತ್ತಿಲ್ಲ. ಇದನ್ನು ಹೋಗಲಾಡಿಲು ಹೊಸದಾಗಿ 20 ಸರ್ಕಾರಿ ಬಸ್‌ಗಳ ಸಂಚರಿಸಲಿವೆ ಎಂದು ಭರವಸೆ ನೀಡಿದರು.

ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ 36 ಲ್ಯಾಪ್‌ಟಾಪ್‌ಗಳನ್ನು ಶಾಸಕರು ವಿತರಿಸಿದರು. ತಹಸೀಲ್ದಾರ್ ರಶ್ಮಿ, ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರಕುಮಾರ್, ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಶಿಶು ಅಭಿವೃದ್ಧಿ ಅಧಿಕಾರಿ ಸುರೇಶ್, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ತಾಲೂಕು ಗ್ರಾಪಂ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಚಿದಂಬರ್ ಮತ್ತಿತರರು ಇದ್ದರು.

- - - -ಫೋಟೋ:

ಹೊಸನಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗ್ಯಾರೆಂಟಿ ಫಲಾನುವಿಗಳ ಸಮಾವೇಶ ಉದ್ಘಾಟಿಸಿದರು.