ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ. 28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ.

ಎಷ್ಟು ದರ ಏರಿಕೆ ಮಾಡಬೇಕೆಂದು ಈ ಕುರಿತು ರಚಿಸಿರುವ ಸಮಿತಿಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆ ನೀಡಬಹುದಾಗಿದೆ. ಹಾಲಿ ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ ₹10 ನಿಂದ ಗರಿಷ್ಠ ದರ ₹60 ವರೆಗಿದೆ. ಈಗ ಶೇ.15 ರಿಂದ ಶೇ.20 ರಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆಯಿದೆ. ಬಹುತೇಕ ಮುಂದಿನ ತಿಂಗಳಿಂದ ಹೊಸ ದರ ಜಾರಿ ಮಾಡುವ ಸಿದ್ಧತೆಯನ್ನು ಬಿಎಂಆರ್‌ಸಿಎಲ್‌ ಮಾಡಿಕೊಂಡಿದೆ. ದರ ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್‌ ಈ ಮೊದಲು ಅ.21ರವರೆಗೆ ಜನತೆಯಿಂದ ಅಭಿಪ್ರಾಯ ಕೇಳಿತ್ತು. ಈ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ವಿರೋಧಿಸಿದ್ದಾರೆ.

ದರ ಹೆಚ್ಚಳ


ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ffc@bmrc.co.in ಗೆ ಕಳುಹಿಸಬಹುದು. ಇಲ್ಲವೇ ಅಂಚೆ ಮೂಲಕ ಬಿಎಂಆರ್​ಸಿಎಲ್​​ ಶುಲ್ಕ ನಿಗದಿ ಸಮಿತಿ ಅಧ್ಯಕ್ಷರಿಗೆ ಕಳುಹಿಸಬಹುದು. ಇಲ್ಲವೇ ವಾಟ್ಸಾಪ್​ ಸಂಖ್ಯೆ 94482 91173 ಸಲಹೆ ಕಳುಹಿಸಬಹುದು ಎಂದು ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.