ಸಾರಾಂಶ
ಉಡುಪಿ ಜಿಲ್ಲೆಯಲ್ಲಿ ಶೇ 20ರಷ್ಟು ಕುಟುಂಬಗಳ, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಸುಮಾರು 3.55 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ ಮಂಗಳವಾರದ ವರೆಗೆ 70,971 ಕುಟುಂಬಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
3.55 ಲಕ್ಷ ಕುಟುಂಬಗಳ ಪೈಕಿ 70,971 ಮನೆಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಗಿದೆಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಶೇ 20ರಷ್ಟು ಕುಟುಂಬಗಳ, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಸುಮಾರು 3.55 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ ಮಂಗಳವಾರದ ವರೆಗೆ 70,971 ಕುಟುಂಬಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.ಸೆ.22 ರಿಂದ ಸಮೀಕ್ಷೆ ಆರಂಭವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕಾಗಿ 3,158 ಗಣತಿದಾರರನ್ನು ನೇಮಿಸಲಾಗಿದೆ.ಉಡುಪಿ ತಾಲೂಕಿನಲ್ಲಿ 97,918 ಕುಟುಂಬಗಳಲ್ಲಿ 7,497, ಕುಂದಾಪುರ ತಾಲೂಕಿನಲ್ಲಿ 65,791 ಕುಟುಂಬಗಳಲ್ಲಿ 15,341, ಕಾರ್ಕಳ ತಾಲೂಕಿನಲ್ಲಿ 57,740 ಕುಟುಂಬಗಳಲ್ಲಿ 12,612, ಕಾಪು ತಾಲೂಕಿನಲ್ಲಿ 43,834 ಕುಟುಂಬಗಳಲ್ಲಿ 6,519, ಹೆಬ್ರಿ ತಾಲೂಕಿನಲ್ಲಿ 12,939 ಕುಟುಂಬಗಳಲ್ಲಿ 4703, ಬ್ರಹ್ಮಾವರ ತಾಲೂಕಿನಲ್ಲಿ 51,139 ಕುಟುಂಬಗಳಲ್ಲಿ 15,513 ಹಾಗೂ ಬೈಂದೂರು ತಾಲೂಕಿನಲ್ಲಿ 26,410 ಕುಟುಂಬಗಳಲ್ಲಿ 8,786 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.ಈ ಸಮೀಕ್ಷೆಯಲ್ಲಿ ನಾಗರಿಕರು ತಾವೇ ನೇರವಾಗಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಏರ್ಪಡಿಸುವ ಶಿಬಿರದಲ್ಲಿ
ಅಥವಾ https://kscbcselfdeclaration.karnataka.gov.in/ ನಲ್ಲಿ ಲಾಗಿನ್ ಆಗಿ ತಮ್ಮ ಕುಟುಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿತಿ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಬಹುದಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ..................3 ದಿನಗಳಲ್ಲಿ ಸಮೀಕ್ಷೆ ಪೂರ್ಣ !
ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಪಂ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್ ಅವರು ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಕೇವಲ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸಿದ್ದು, ಅವರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.