ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ 200 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆಯನ್ನು ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದೊಂದಿಗೆ ಸ್ವಾತಂತ್ರ್ಯೋತ್ಸವದ ಮುನ್ನಾದಿನ ಶುಕ್ರವಾರ ನೆರವೇರಿಸಿತು.
ಧಾರವಾಡ:
ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ 200 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆಯನ್ನು ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದೊಂದಿಗೆ ಸ್ವಾತಂತ್ರ್ಯೋತ್ಸವದ ಮುನ್ನಾದಿನ ಶುಕ್ರವಾರ ನೆರವೇರಿಸಿತು.ನಗರದ ಲಿಂಗಾಯತ್ ಹಾಲ್‌ದಿಂದ ಪ್ರಾರಂಭವಾದ ತಿರಂಗ ಯಾತ್ರೆಯು ಸಪ್ತಾಪುರ ಬಾವಿ, ಕರ್ನಾಟಕ ಕಾಲೇಜು ವೃತ್ತದ ಮಾರ್ಗವಾಗಿ ಜುಬ್ಲಿ ಸರ್ಕಲ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಪೌರ ಕಾರ್ಮಿಕರಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು. ತಿರಂಗಾ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಹಿಡಿದು ಭಾರತ ಮಾತೆಗೆ ಜಯಘೋಷ ಮೊಳಗಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಮಹನೀಯರನ್ನು ಯಾತ್ರೆಯಲ್ಲಿ ಸ್ಮರಿಸಲಾಯಿತು.
ಯುವಜನರಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರದ ಬಗ್ಗೆ ಜವಾಬ್ದಾರಿಯ ಭಾವನೆ ಬೆಳೆಸುವ ಉದ್ದೇಶದಿಂದ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಎಬಿವಿಪಿ ಉತ್ತರ ಪ್ರಾಂತದ ಉಪಾಧ್ಯಕ್ಷ ಡಾ. ಆನಂದ ಹೊಸೂರ ಹೇಳಿದರು.ಪ್ರಮುಖರಾದ ಈರಪ್ಪ ಪತ್ತಾರ, ರಾಮನಗೌಡ ಪಾಟೀಲ, ಪವನ ಕರಿಕಟ್ಟಿ, ಅಭಿಷೇಕ ದೊಡ್ಡಮನಿ, ಸಚಿನ ಕೋಟ್ಯಾಳ, ನಾಗದತ್ತ ಒಡೆಯರ, ವಿಜಯಲಕ್ಷ್ಮಿ ಮಾನೆ, ಸೋಹನ್ ಮಲ್ಲಾಡ, ವಿದ್ಯಾನಂದ ಪ್ರಜ್ವಲ್, ಲಕ್ಷ್ಮೀನಾರಾಯಣ್, ಸುಮಿತ್ ಗೋರ್ಪಡೆ, ಪ್ರಸನ್ನ ದ್ಯಾಮನಗೌಡ ಇದ್ದರು.