ಸಾರಾಂಶ
ಮಾಹೆ ಮಣಿಪಾಲದ ಕರೆಂಟ್ ಗುಡ್ ಮ್ಯಾನುಫಾಕ್ಚರಿಂಗ್ ಪ್ರಾಕ್ಟೀಸ್ (ಸಿಜಿಎಂಪಿ) ಕೇಂದ್ರಕ್ಕೆ ಸತತ 2ನೇ ಬಾರಿಗೆ, ಔಷಧೀಯ ಗುಣಮಟ್ಟಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿಷ್ಠಿತ ಇಂಡಿಯಾ ಫಾರ್ಮಾ ಅವಾರ್ಡ್ಸ್ - 2024 ಲಭಿಸಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆ ಮಣಿಪಾಲದ ಕರೆಂಟ್ ಗುಡ್ ಮ್ಯಾನುಫಾಕ್ಚರಿಂಗ್ ಪ್ರಾಕ್ಟೀಸ್ (ಸಿಜಿಎಂಪಿ) ಕೇಂದ್ರಕ್ಕೆ ಸತತ 2ನೇ ಬಾರಿಗೆ, ಔಷಧೀಯ ಗುಣಮಟ್ಟಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿಷ್ಠಿತ ಇಂಡಿಯಾ ಫಾರ್ಮಾ ಅವಾರ್ಡ್ಸ್ - 2024 ಲಭಿಸಿದೆ.ಗ್ರೇಟರ್ ನೋಯ್ಡಾದಲ್ಲಿ ನಡೆದ ಇಂಡಿಯಾ ಫಾರ್ಮಾ ಅವಾರ್ಡ್ಸ್-2024 ಅಂಗವಾಗಿ ನಡೆದ ಇಂಡಿಯಾ ಎಕ್ಸ್‌ಫೋದಲ್ಲಿ 2000ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 50,000 ಪ್ರತಿನಿಧಿಗಳು ಭಾಗವಹಿಸಿದ್ದರು.ಈ ಎಕ್ಸ್‌ಫೋದಲ್ಲಿ ಮಣಿಪಾಲ ಸಿಜಿಎಂಪಿ ಕೇಂದ್ರವು ತನ್ನ ವಿಶ್ವದ ಮೊದಲ ಔಷಧೀಯ ಡಿಜಿಟಲ್ ವಸ್ತು ಸಂಗ್ರಹಾಲಯವನ್ನು ಪ್ರದರ್ಶಿಸಿತ್ತು. ಇದು ವಿಶ್ವದರ್ಜೆಯ ಗುಣಮಟ್ಟ ನಿಯಂತ್ರಣ ವ್ಯವಸ್ಥೆ, ತಾಂತ್ರಿಕ ಆವಿಷ್ಕಾರ, ಕಠಿಣ ತರಬೇತಿ ಮಾಡ್ಯೂಲ್‌ಗಳು ಮತ್ತು ಪರಿಣಾಮಗಳನ್ನು ಅಳೆಯುವ ಬದ್ಧತೆಯನ್ನು ಪ್ರಸ್ತುತಪಡಿಸಿತು. 6 ಮಂದಿ ತೀರ್ಪುಗಾರರು ಈ ಉಪಕ್ರಮದ ನಾವೀನ್ಯತೆ ಮತ್ತು ದೀರ್ಘಕಾಲೀನ ಸಾಮಾಜಿಕ ಪ್ರಭಾವವನ್ನು ಶ್ಲಾಘಿಸಿ, ಇದು ಔಷಧೀಯ ವಲಯಕ್ಕೆ ಗಮನಾರ್ಹ ಕೊಡುಗೆಯಾಗಿದೆ ಎಂದು ಗುರುತಿಸಿ, 276 ಪ್ರಸ್ತುತಿಗಳಲ್ಲಿ ಮಣಿಪಾಲ ಸಿಡಿಎಂಪಿ ಪ್ರಸ್ತುತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದರು.ಮಣಿಪಾಲ್ ಸಿಜಿಎಂಪಿ ಮ್ಯೂಸಿಯಂನ ಸಂಯೋಜಕ ಗಿರೀಶ್ ಪೈ ಕೆ. ಮತ್ತು ಸಹಸಂಯೋಜಕ ಡಾ. ಮುದುಕೃಷ್ಣ ಬಿ.ಎಸ್. ಅವರು ಬ್ಲೂ ಕ್ರಾಸ್ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಾಲಚಂದ್ರ ಬಾರ್ವೆ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.