ಪರ್ಕಳ ಮಂಗಳಾ ಕಲಾ ಸಾಹಿತ್ಯ ವೇದಿಕೆ 21ನೇ ವಾರ್ಷಿಕೋತ್ಸವ

| Published : Feb 25 2025, 12:49 AM IST

ಪರ್ಕಳ ಮಂಗಳಾ ಕಲಾ ಸಾಹಿತ್ಯ ವೇದಿಕೆ 21ನೇ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಸಂಭ್ರಮ ಕಲಾಸಂಗಮ ಕಾರ್ಯಕ್ರಮವು ಭಾನುವಾರ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ ಹೊಟೇಲ್‌ ಮಾಲೀಕ ಮೋಹನ್ ದಾಸ್ ನಾಯಕ್ ಪರ್ಕಳ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಸಂಭ್ರಮ ಕಲಾಸಂಗಮ ಕಾರ್ಯಕ್ರಮವು ಭಾನುವಾರ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ ಹೊಟೇಲ್‌ ಮಾಲೀಕ ಮೋಹನ್ ದಾಸ್ ನಾಯಕ್ ಪರ್ಕಳ ಜಂಟಿಯಾಗಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತುಳು ಚಲನಚಿತ್ರ ಹಾಗೂ ನಾಟಕ ಕಲಾವಿದ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಅಮೈ ಮಾಲಿಂಗ ನಾಯ್ಕ್, ಚಲನಚಿತ್ರ ನಟ ಯೋಗೇಶ್ ಶೆಟ್ಟಿ ಧರ್ಮೆಮಾರ್, ಕವಿ ಸಾಹಿತಿ ವಸಂತ್ ಕುಮಾರ್ ಪೆರ್ಲ, ಸ್ಥಳೀಯ ಗಣ್ಯರಾದ ಬೂಧ ಶೆಟ್ಟಿಗಾರ್ ಆಗಮಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ರಾಘವೇಂದ್ರ ಪ್ರಭು ಕರ್ವಾಲು, ಎಂ. ಮನೋಹರ್, ಮಹೇಶ್ ಆಚಾರ್ಯ ಮರ್ಣೆ, ಕೇಶವ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೋನ್ಸೆ ಪುಷ್ಕಳ್‌ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ, ಮಾಲಿಂಗೇಶ್ವರ ನಾಟ್ಯ ತಾಂಡದಿಂದ ದೀಕ್ಷಾ ಗುಂಡುಪಾದೆ ಇವರ ನಿರ್ದೇಶನದಲ್ಲಿ ನೃತ್ಯರೂಪಕ, ಸಿಂಚನ ಮ್ಯೂಸಿಕಲ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ವೇದಿಕೆಯ ಪ್ರಮುಖರಾದ ರವೀಂದ್ರ ನಾಯಕ್ ಸಣ್ಣಕಿಬೆಟ್ಟು ಸ್ವಾಗತಿಸಿದರು. ಸಾನ್ವಿ ಅವರು ಪ್ರಾರ್ಥಿಸಿದರು, ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಇವರು ಕಾರ್ಯಕ್ರಮ ನಿರೂಪಿಸಿದರು.