ಹುಣಸಗಿ ಪಟ್ಟಣದಲ್ಲಿ ಧಾರಕಾರ ಮಳೆಗೆ 22 ಮನೆಗಳಿಗೆ ಹಾನಿ

| Published : Aug 19 2024, 12:54 AM IST

ಸಾರಾಂಶ

ಪಟ್ಟಣದಲ್ಲಿ ಶುಕ್ರವಾರ ಬೆ.3 ರಿಂದ 6 ಗಂಟೆಯವರೆಗೆ ಸುರಿದ ಭಾರೀ ಮಳೆಯಿಂದಾಗಿ ಪಟ್ಟಣದ ಹಲವು ರಸ್ತೆಗಳು ಜಲಾವೃತವಾಗಿದ್ದು, ಇನ್ನು ಕೆಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ತಾಲೂಕಿನಾದ್ಯಾಂತ ಸುರಿದ ಮಳೆಗೆ 22 ಮನೆಗಳು ಹಾನಿಯಾಗಿವೆ ಎಂದು ಕಂದಾಯ ಮೂಲಗಳಿಂದ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದಲ್ಲಿ ಶುಕ್ರವಾರ ಬೆ.3 ರಿಂದ 6 ಗಂಟೆಯವರೆಗೆ ಸುರಿದ ಭಾರೀ ಮಳೆಯಿಂದಾಗಿ ಪಟ್ಟಣದ ಹಲವು ರಸ್ತೆಗಳು ಜಲಾವೃತವಾಗಿದ್ದು, ಇನ್ನು ಕೆಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ತಾಲೂಕಿನಾದ್ಯಾಂತ ಸುರಿದ ಮಳೆಗೆ 22 ಮನೆಗಳು ಹಾನಿಯಾಗಿವೆ ಎಂದು ಕಂದಾಯ ಮೂಲಗಳಿಂದ ತಿಳಿದು ಬಂದಿದೆ.ಶಾಲಾ-ಕಾಲೇಜುಗಳಿಗೆ ಹೋಗಲು ಮಕ್ಕಳು ಹೈರಾಣು ಆಗಿದ್ದು, ಜನರೂ ಪರದಾಡುವಂತಾಗಿದೆ. ಪಟ್ಟಣದ ಬಹುತೇಕ ರಸ್ತೆಗಳು ಕೆಸರು ಮಯವಾಗಿವೆ. ಕೆಲವು ಕಡೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ನಿಂತುಕೊಂಡಿದೆ. ಹೀಗಾಗಿ ಆ ಪ್ರದೇಶದ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು. ಕೆಲ ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ, ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ವರದಿ ಆಗಿದೆ.ಜಮೀನುಗಳಲ್ಲಿ ಭತ್ತ ಸೇರಿದಂತೆ ಅನೇಕ ಬೆಳೆಗಳು ಮಳೆಯ ರಭಸಕ್ಕೆ ಹಾನಿಯಾಗಿವೆ. ಧಾರಾಕಾರವಾಗಿ ಸುರಿದ ಮಳೆಯು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಪಟ್ಟಣದ 8ನೇ ವಾರ್ಡಿನಲ್ಲಿ ಹಲವು ಮನೆಗಳಿಗೆ ಹಾಗೂ ರಸ್ತೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಪಟ್ಟಣ ಪಂಚಾಯ್ತಿ ಸದಸ್ಯ ಶರಣು ದಂಡಿನ್ ಅವರು ತಹಸೀಲ್ದಾರ್ ಜತೆ ಮಾತನಾಡಿ, ಪಟ್ಟಣ ಪಂಚಾಯ್ತಿ ಜೆಸಿಬಿ ಯಂತ್ರದ ಮೂಲಕ ನೀರು ಸರಾಗವಾಗಿ ಹರಿಯಲು ಕ್ರಮವಹಿಸಿದರು.