22ನೇ ವರ್ಷದ ತುಳುವೆರೆ ತುಡರ ಪರ್ಬ: ಸಾಧಕರಿಗೆ ಗೌರವ

| Published : Nov 05 2024, 12:32 AM IST

ಸಾರಾಂಶ

ಮೂಲ್ಕಿಯ ಯುವವಾಹಿನಿ ಘಟಕದ ಆಶ್ರಯದಲ್ಲಿ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹ ದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ ಆಚರಿಸಲಾಯಿತು. ಗೂಡು ದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಗೋ ಪೂಜೆ, ಬಲೀಂದ್ರ ಪೂಜೆ, ತಿಬಿಲ-ಸಾನಾದಿಯ ಬೆಳಕಿನ ಹಬ್ಬ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಘಟಕದ ಸದಸ್ಯರಿಂದ ಗಟ್ಟಿ ಅವಲಕ್ಕಿಯ ತಮ್ಮನ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಡಾರ ಪರ್ಬವು ನಮ್ಮ ತುಳುನಾಡಿನ ಸಂಸ್ಕಾರ, ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದ್ದು ಯುವವಾಹಿನಿ ಸಂಸ್ತೆಯು ಯುವ ಪೀಳಿಗೆಗೆ ಹಬ್ಬದ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಿದೆಯೆಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಹೇಳಿದರು.

ಮೂಲ್ಕಿಯ ಯುವವಾಹಿನಿ ಘಟಕದ ಆಶ್ರಯದಲ್ಲಿ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹ ದಲ್ಲಿ ನಡೆದ 22ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ರಿತೇಶ್ ಮುಲ್ಕಿ ವಹಿಸಿದ್ದು ಕಾರ್ಯಕ್ರಮದಲ್ಲಿ ದ್ಯೆವರಾಧಕ, ಸಮಾಜ ಸೇವಕ ಕೃಷ್ಣಪ್ಪ ಎಸ್. ಸನಿಲ್ ಮಾನಂಪಾಡಿ ಅವರನ್ನು ಗೌರವಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಮನೋ ವೈದ್ಯಕೀಯ ಸಮಾಲೋಚಕ ಎಸ್.ಕೆ. ಶ್ರೀಪತಿ ಭಟ್‌, ಪೋಸ್ಟ್ ಮಾಸ್ತರ್‌ ಮೊಹಮ್ಮದ್ ಸಲೀಂ ಕೆಂಪುಗುಡ್ಡೆ, ನಿವೃತ್ತ ಮುಖ್ಯ ಶಿಕ್ಷಕ ಪ್ರಾನ್ಸಿಸ್ ಡಿ ಕುನ್ಹ ಕಾರ್ನಾಡ್ ,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕಾರ್ಯಕ್ರಮದ ನಿರ್ದೇಶಕರಾದ ರಾಜೇಶ್ವರಿ ನಿತ್ಯಾನಂದ, ವಿನಯ ವಿಶ್ವನಾಥ್ ಉಪಸ್ಥಿತರಿದ್ದರು.

ರಿತೇಶ್ ಅಂಚನ್ ಸ್ವಾಗತಿಸಿದರು. ಮೋಹನ್‌ ಸುವರ್ಣ ಪ್ರಸ್ತಾವನೆಗ್ಯೆದರು. ಕಾರ್ಯದರ್ಶಿ ಲತೀಶ್‌ ಕಾರ್ನಾಡು ವಂದಿಸಿದರು. ಉದಯ ಅಮೀನ್‌ ಮಟ್ಟು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗೂಡು ದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಗೋ ಪೂಜೆ, ಬಲೀಂದ್ರ ಪೂಜೆ, ತಿಬಿಲ-ಸಾನಾದಿಯ ಬೆಳಕಿನ ಹಬ್ಬ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಘಟಕದ ಸದಸ್ಯರಿಂದ ಗಟ್ಟಿ ಅವಲಕ್ಕಿಯ ತಮ್ಮನ ನಡೆಯಿತು.