ಸಾರಾಂಶ
ಬಡಿಗವಾಡ ಗ್ರಾಮದ ದಿ.ದುಂಡಪ್ಪ ಮಲ್ಲಪ್ಪ ಚೌಕಶಿ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಒಂದೇ ಕುಟುಂಬದ 23 ಜನ ರಕ್ತದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಉಪ್ಪಾರ ಸಮಾಜದ ಹಿರಿಯ ಮುಖಂಡ, ಜಿಪಂ ಮಾಜಿ ಸದಸ್ಯ ಹಾಗೂ ಪ್ರಭಾ ಶುಗರ್ ನಿರ್ದೇಶಕರಾಗಿದ್ದ ತಾಲೂಕಿನ ಬಡಿಗವಾಡ ಗ್ರಾಮದ ದಿ.ದುಂಡಪ್ಪ ಮಲ್ಲಪ್ಪ ಚೌಕಶಿ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ರೋಟರಿ ರಕ್ತ ಭಂಡಾರ ಹಾಗೂ ರೋಟರಿ ಸೇವಾ ಸಂಘ ಗೋಕಾಕ ಹಾಗೂ ಡಿ.ಎಂ.ಚೌಕಶಿ ಪ್ರತಿಷ್ಠಾನಗಳ ಜಂಟಿ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.ಶಿಬಿರದಲ್ಲಿ ಚೌಕಶಿ ಕುಟುಂಬದ ಹಿರಿಯರನ್ನು ಹೊರತು ಪಡಿಸಿ ಒಂದೇ ಕುಟುಂಬದ 23 ಜನ ರಕ್ತದಾನ ಮಾಡಿದರು. ಇವರೊಂದಿಗೆ ಅನೇಕ ಜನ ಬಂಧುಗಳು ಹಾಗೂ ಅಭಿಮಾನಿಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡರಾದ ಅಶೋಕ ಪುಜಾರಿ, ಘಟಪ್ರಭಾ ಪೊಲೀಸ್ ಇನ್ಸಪೆಕ್ಟರ್ ಬಸವರಾಜ ಕಾಮನಬೈಲ್, ಜಿಪಂ ಮಾಜಿ ಸದಸ್ಯರಾದ ರಾಜು ಕತ್ತಿ, ಕುಮಾ ಚೌಕಶಿ, ತಾಪಂ ಮಾಜಿ ಸದಸ್ಯರಾದ ಈರಪ್ಪ ಸಂಪಗಾರ, ನಿಂಗಣ್ಣ ಮಾಳ್ಯಾಗೊಳ, ನಿಂಗಪ್ಪ ಕಮತಿ, ರೋಟರಿ ರಕ್ತ ಭಂಡಾರದ ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೆರ, ಸುರೇಶ ಬಿರಾದಾರ ಪಾಟೀಲ, ಕಲ್ಲಪ್ಪ ಚೌಕಶಿ, ಕೆಂಪಣ್ಣ ಚೌಕಶಿ, ವಕೀಲ ಮಲ್ಲಿಕಾರ್ಜುನ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ, ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.