ಸಾರಾಂಶ
230 crore grant for irrigation development project
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ವಡಗೇರಾ ಭಾಗದ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಒಟ್ಟು 230 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 14 ವರ್ಷಗಳಿಂದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಭಾಗದಲ್ಲಿದ್ದ ರೈತರ ಬೇಡಿಕೆಗೆ ಈಚೆಗೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿರುವ ಶಾಸಕರು, ಕಳೆದ 2 ವರ್ಷಗಳಿಂದ ಸತತವಾಗಿ ಪರಿಶ್ರಮ ಹಾಗೂ ಕಾಳಜಿ ವಹಿಸಿರುವುದರಿಂದ ಯಾದಗಿರಿ ಹಾಗೂ ವಡಗೇರಾ ಭಾಗದ ರೈತರಿಗೆ ಇಂತಹ ಅಭೂತಪೂರ್ವ ಅನುದಾನ ದೊರಕಿದಂತಾಗಿದೆ ಎಂದರು.
ಒಟ್ಟು 12.411 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ನೀರಾವರಿ ಪ್ರದೇಶದಲ್ಲಿ ಕಾಲುವೆ ನಿರ್ಮಿಸುವ ಕುರಿತು ಕೆಲಕಾಲ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹತ್ತಿರ ಚರ್ಚಿಸಿ, 230 ಕೋಟಿ ಅನುದಾನದ ಅವಶ್ಯಕತೆ ಬಗ್ಗೆ ವಿವರಿಸಿದ್ದೇನೆ. ಈ ಭಾಗದ ರೈತರಿಗೆ ಸಿಹಿ ಸುದ್ದಿ ಇದಾಗಿದ್ದು, ಈಗಾಗಲೇ ಅನುದಾನದ ಚರ್ಚೆ ಆಗಿದ್ದು, ಮುಂದಿನ ರೂಪರೇಷೆಗಳನ್ನು ಗೊತ್ತುಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.-----
6ವೈಡಿಆರ್1: ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಭೇಟಿ ಮಾಡಿ ನೀರಾವರಿ ಅನುದಾನ ಬಿಡುಗಡೆ ಕುರಿತು ಚರ್ಚಿಸಿದರು.