ಸಾರಾಂಶ
ಶಿಬಿರದಲ್ಲಿ ಮೈಸೂರು ಕೆ ಆರ್ ಹಾಸ್ಪಿಟಲ್ -213 ಯೂನಿಟ್, ಆದಿಚುಂಚನಗಿರಿ ಆಸ್ಪತ್ರೆ -106 ಯೂನಿಟ್, ಬೆಂಗಳೂರು ಕಮಾಂಡೋ ಹಾಸ್ಪಿಟಲ್ -57 ಯೂನಿಟ್, ಮಂಡ್ಯ ಜಿಲ್ಲಾ ಆಸ್ಪತ್ರೆ -1011 ಯೂನಿಟ್, ಚಾಮರಾಜನಗರ ಜಿಲ್ಲಾ ಆಸ್ಪತ್ರೆ -138 ಯೂನಿಟ್ ಸೇರಿ ಒಟ್ಟು 1525 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಯಿತು.
ಮಂಡ್ಯ: ಜೀವಧಾರೆ ಟ್ರಸ್ಟ್ ವತಿಯಿಂದ ನಡೆದ 24 ಗಂಟೆಗಳ ಕಾಲ ನಿರಂತರ ರಕ್ತದಾನ ಶಿಬಿರದಲ್ಲಿ 1525 ಯೂನಿಟ್ ರಕ್ತ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಸೈನಿಕ ಪಿತಾಮಹ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 24 ಗಂಟೆಗಳ ಕಾಲ ರಕ್ತದಾನ ಶಿಬಿರವು ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಶುಕ್ರವಾರ ಬೆಳಗ್ಗೆವರೆಗೂ ಮುಂದುವರೆಯಿತು.ಶಿಬಿರಕ್ಕೆ 1700ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆ ತಾಲೂಕುಗಳಿಂದಲೂ ಯುವ ಸಮೂಹ ಸೇರಿದಂತೆ ಹಿರಿಯರು ಕೂಡ ರಕ್ತದಾನ ಮಾಡುವ ಮೂಲಕ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ.
ಶಿಬಿರದಲ್ಲಿ ಮೈಸೂರು ಕೆ ಆರ್ ಹಾಸ್ಪಿಟಲ್ -213 ಯೂನಿಟ್, ಆದಿಚುಂಚನಗಿರಿ ಆಸ್ಪತ್ರೆ -106 ಯೂನಿಟ್, ಬೆಂಗಳೂರು ಕಮಾಂಡೋ ಹಾಸ್ಪಿಟಲ್ -57 ಯೂನಿಟ್, ಮಂಡ್ಯ ಜಿಲ್ಲಾ ಆಸ್ಪತ್ರೆ -1011 ಯೂನಿಟ್, ಚಾಮರಾಜನಗರ ಜಿಲ್ಲಾ ಆಸ್ಪತ್ರೆ -138 ಯೂನಿಟ್ ಸೇರಿ ಒಟ್ಟು 1525 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಯಿತು.ಗುರುವಾರ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹಾಗೂ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಸೇರಿ ಹಲವು ಅಧಿಕಾರಿಗಳು, ರಾಜಕಾರಣಿಗಳು, ಯುವ ಮುಖಂಡರು ರಕ್ತದಾನ ಮಾಡಿದ್ದರು. ಶುಕ್ರವಾರವೂ ಕೂಡ ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರಕ್ತದಾನ ಮಾಡಿದರು. ಹಾಸ್ಯನಟ ಚಂದ್ರಪ್ರಭ ಕೂಡ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.