ಚಡಚಣ ಪಟ್ಟಣ ಪಂಚಾಯ್ತಿ ಚುನಾವಣೆಗೆ 24 ನಾಮಪತ್ರ ಸಲ್ಲಿಕೆ

| Published : Dec 15 2023, 01:31 AM IST

ಸಾರಾಂಶ

ಚಡಚಣ ಪಟ್ಟಣ ಪಂಚಾಯ್ತಿ ಚುನಾವಣೆಗೆ 24 ನಾಮಪತ್ರ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಚಡಚಣ

ಸ್ಥಳಿಯ ಪಟ್ಟಣ ಪಂಚಾಯತಿಗೆ ಡಿ.27ರಂದು ಜರುಗುವ ಚುನಾವಣೆಗೆ ಬುಧವಾರ 24 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಜೆ. ನಾಯಕ್ ಹಾಗೂ ಅನೀಲ ಹಳ್ಳಿ ತಿಳಿಸಿದ್ದಾರೆ.

ವಾರ್ಡ್ ನಂ. 1 ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಬುರುಡ, ವಾರ್ಡ್ ನಂ. 2 ಮಾಸೂಬ ಮಾಸಳಿ, ವಾರ್ಡ್ ನಂ.3 ಕಾಂಗ್ರೆಸ್ ಬಂಬಲಿತ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಮೀರಾಸಾಬ ಅತ್ತಾರ, ಪಕ್ಷೇತರ ಅಭ್ಯರ್ಥಿ ಗೌಸ ಟಪಾಲ, ವಾರ್ಡ್ ನಂ. 5 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಲಾಯಿ ನದಾಫ್, ಪಕ್ಷೇತರ ಅಭ್ಯರ್ಥಿ ಬಸೀರ್‌ ನದಾಫ್‌, ವಾರ್ಡ್ ನಂ. 7 ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಖಾ ಬನಸೋಡೆ, ವಾರ್ಡ್ ನಂ. 8 ಬಿಜೆಪ ಬೆಂಬಲಿತ ಅಭ್ಯರ್ಥಿ ಅರುಣಾಕ್ಷಿ ಗಢದೇವರಮಠ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಮತಾಜ ನದಾಫ್‌, ವಾರ್ಡ್ ನಂ.9ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಕಾಂತ ಗಂಟಗಲ್ಲಿ, ಪಕ್ಷೇತರ ಅಭ್ಯರ್ಥಿ ಅಪ್ಪಾಸಾಹೇಬ ಸಾಯಬಣ್ಣ ಹಳ್ಳಿ, ವಾರ್ಡ್ ನಂ.10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬೀರಪ್ಪ ಬನಸೋಡೆ, ಪಕ್ಷೇತ್ರ ಅಭ್ಯರ್ಥಿ ಸಾಗರ ಅಲಕುಂಟೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಲಾಜಿ ಗಾಡಿವಡ್ಡರ, ವಾರ್ಡ್ ನಂ. 11ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ ಪಾಟೀಲ, ಚಂದ್ರಕಾಂತ ಕಲ್ಮನಿ ಹಾಗೂ ಚಂದ್ರಕಾಂತ ಕಲ್ಮನಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.13 ಪಕ್ಷೇತರ ಅಭ್ಯರ್ಥಿಯಾಗಿ ಶಾರದಾಬಾಯಿ ಮೇತ್ರಿ, ವಾರ್ಡ್ ನಂ.14 ಪಕ್ಷೇತರ ಅಭ್ಯರ್ಥಿಯಾಗಿ ಸವಿತಾ ಶಿಂಧೆ, ವಾರ್ಡ್ ನಂ. 15 ಕಾಂಗ್ರಸ್ ಬೆಂಬಲಿತ ಅಭ್ಯರ್ಥಿ ಪ್ರಶಾಂತ ಮುಂಡೆವಾಡಿ, ವಾರ್ಡ್ ನಂ.16 ಪಕ್ಷೇತರ ಅಭ್ಯರ್ಥಿಯಾಗಿ ಕಸ್ತೂರಿಬಾಯಿ ಪಾಟೀಲ, ವಿಜಯಲಕ್ಷ್ಮೀ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.