ಸಾರಾಂಶ
ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ೧೦೧೫ ಹೆಕ್ಟೇರ್ ಕೃಷಿ ಬೆಳೆ, ೩೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ ೨೪೬ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ವಿವಿಧ ಬೆಳೆಗಳು ಹಾಳಾಗಿದ್ದು, ಇನ್ನು ಕೆಲವು ಕಡೆ ರಾಶಿ ಹಾಕಿದ್ದ ಪೀಕು ನೀರಿಗೆ ಸಿಲುಕಿ ಹಾನಿಗೀಡಾಗಿದೆ.
ಹಾವೇರಿ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ೧೦೧೫ ಹೆಕ್ಟೇರ್ ಕೃಷಿ ಬೆಳೆ, ೩೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ ೨೪೬ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ವಿವಿಧ ಬೆಳೆಗಳು ಹಾಳಾಗಿದ್ದು, ಇನ್ನು ಕೆಲವು ಕಡೆ ರಾಶಿ ಹಾಕಿದ್ದ ಪೀಕು ನೀರಿಗೆ ಸಿಲುಕಿ ಹಾನಿಗೀಡಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಾಡಿಕೆ ಮಳೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ವಾಡಿಕೆ ಮಳೆ ೧೦೨ ಮೀಮೀ ಸುರಿಯಬೇಕಿತ್ತು. ಮಳೆ ಕೊರತೆಯಿಂದಾಗಿ ಕೇವಲ ೪೭.೨ ಮೀಮೀ ಸುರಿದು ಶೇ.೫೪ರಷ್ಟು ಮಳೆ ಕೊರತೆ ದಾಖಲಾಗಿತ್ತು. ಆದರೆ ಅಕ್ಟೋಬರ್ ೧ರಿಂದ ಅ.೧೩ರವರೆಗೆ ಬಹುತೇಕ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ವಾಡಿಕೆ ಮಳೆ ೬೬ ಮೀಮೀ ಇದ್ದರೆ ಅದರ ದುಪ್ಪಟ್ಟು ಅಂದರೆ ಬರೋಬ್ಬರಿ ೧೨೬.೨ ಮೀಮೀ ಮಳೆ ಸುರಿದು, ಶೇ.೩೧೭ಪಟ್ಟು ಹೆಚ್ಚಿನ ಮಳೆ ಸುರಿದ ಬಗ್ಗೆ ದಾಖಲಾಗಿದ್ದು ರೈತರನ್ನು ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ.೧೦೧೫ ಹೆಕ್ಟೇರ್ ಬೆಳೆ ಹಾನಿ..ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹಾವೇರಿ ತಾಲೂಕಿನ ೨೮೦ ಹೆಕ್ಟೇರ್, ರಾಣಿಬೆನ್ನೂರ ೨೧೫, ಬ್ಯಾಡಗಿ ೨೧೦, ಹಾನಗಲ್ಲ ೧೧೩, ಶಿಗ್ಗಾವಿ ೧೯೭ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೇಜೋಳ, ಶೇಂಗಾ, ಹತ್ತಿ, ಭತ್ತ, ಜೋಳ, ಸೋಯಾಬಿನ್ ಬೆಳೆಗಳು ಸೇರಿ ಒಟ್ಟು ೧೦೧೫ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾನಿಗೀಡಾಗಿದೆ. ಅದೇ ರೀತಿ ತೋಟಗಾರಿಕೆಯ ೩೦.೨೫ ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ.ಹೆಚ್ಚಿದ ಮಳೆ ಪ್ರಮಾಣ..ಬ್ಯಾಡಗಿ ತಾಲೂಕಿನಲ್ಲಿ ವಾಡಿಕೆ ಮಳೆ ೨೭.೬ಮೀಮೀ ಇದ್ದರೆ ಸುರಿದದ್ದು ೧೪೦.೬ ಮೀಮೀ ಇದು ಬರೋಬ್ಬರಿ ೪೦೯ಪಟ್ಟು ಹೆಚ್ಚಿದೆ. ಅದೇ ರೀತಿ ಹಾನಗಲ್ಲ ೨೫.೬ (ಸುರಿದ ಮಳೆ ೭೨.೮), ಹಾವೇರಿ ೩೪.೪ (೧೦೭.೬), ಹಿರೇಕೆರೂರ ೨೫.೧ (೧೦೪.೧), ರಾಣಿಬೆನ್ನೂರ ೨೯.೯ (೧೪೮.೭), ಸವಣೂರು ೨೯.೩ (೧೪೧.೧), ಶಿಗ್ಗಾಂವಿ ೩೩.೪ (೯೦.೪) ಹಾಗೂ ರಟ್ಟೀಹಳ್ಳಿಯಲ್ಲಿ ೨೭.೩ಮಿಮೀ ವಾಡಿಕೆ ಮಳೆ ಇದ್ದರೆ ೯೧.೧ಮಿಮೀ ಮಳೆ ಸುರಿದಿದೆ.೨೪೬ ಮನೆಗಳಿಗೆ ಹಾನಿ..ಕಳೆದ ಒಂದುವಾರದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ೨೪೬ ಮನೆಗಳಿಗೆ ಹಾನಿ ಸಂಭವಿಸಿದೆ. ಬ್ಯಾಡಗಿ ತಾಲೂಕಿನಲ್ಲಿ ೩೨ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಗಲ್ಲ ತಾಲೂಕಿನಲ್ಲಿ ೨೨, ಹಾವೇರಿ ೫, ಹಿರೇಕೆರೂರ ೯, ರಾಣಿಬೆನ್ನೂರ ೧೦, ರಟ್ಟೀಹಳ್ಳಿ ೮, ಸವಣೂರ ೫೭ ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೧೦೩ ಮನೆಗ¼ ಸೇರಿದಂತೆ ಒಟ್ಟು ೨೪೬ ಮನೆಗಳು ಹಾಗೂ ೧ದನದ ಕೊಟ್ಟಿಗೆ ಹಾನಿಗೀಡಾಗಿವೆ. ಮಳೆಯಿಂದಾಗಿ ಬ್ಯಾಡಗಿ ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ತಗಡಿನ ಶೆಡ್ ಬಿದ್ದು ಎರಡು ಕುರಿ ಹಾಗೂ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಭಾರಿಮಳೆಗೆ ನೀರಿನಲ್ಲಿ ಮುಳುಗಿ ಹಸುವೊಂದು ಮೃತಪಟ್ಟಿದೆ.ಜಿಲ್ಲೆಯಲ್ಲಿ ಒಂದು ವಾರದಿಂದ ಈಚೆಗೆ ಸುರಿದ ಮಳೆಯಿಂದಾಗಿ ಸಂಭವಿಸಿರುವ ಹಾನಿ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರು. ೧೨.೧೭ ಕೋಟಿ, ತಹಸೀಲ್ದಾರ ಖಾತೆಯಲ್ಲಿ ರು. ೩.೭೪ ಕೋಟಿ ಅನುದಾನ ಲಭ್ಯವಿದ್ದು, ಶೀಘ್ರದಲ್ಲಿಯೇ ಹಾನಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.