೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದ ಚಿಕ್ಕಮಂಡ್ಯ ಪ್ರೌಢಶಾಲೆಗೆ ೨೫ ಸಾವಿರ ರು. ನಗದು ಬಹುಮಾನ ಪ್ರಕಟಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಮನಗರದಲ್ಲಿ ನಡೆದ ವಿಭಾಗೀಯ ಮಟ್ಟದ ಬೆಂಗಳೂರು ದಕ್ಷಿಣ ಹಾಗೂ ಮಂಡ್ಯ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ ಶಿಬಿರದಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದಿದ್ದ ತಾಲೂಕಿನ ಚಿಕ್ಕಮಂಡ್ಯ ಪ್ರೌಢಶಾಲೆಗೆ ಶಾಲಾ ಶಿಕ್ಷಣ ಇಲಾಖೆ ನೀಡುವ ೨೫ ಸಾವಿರ ರು. ನಗದು ಬಹುಮಾನ ದೊರಕಿದೆ.೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದ ಚಿಕ್ಕಮಂಡ್ಯ ಪ್ರೌಢಶಾಲೆಗೆ ೨೫ ಸಾವಿರ ರು. ನಗದು ಬಹುಮಾನ ಪ್ರಕಟಿಸಲಾಯಿತು. ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಎಚ್.ಎನ್.ದೇವರಾಜು ಅವರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಗೌರವ ಪುರಸ್ಕಾರ ಪ್ರದಾನ ಮಾಡಿದರು.
ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಮತ್ತು ರಾಜ್ಯ ಶಿಕ್ಷಕರ ಕಲ್ಯಾಣನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ಪದಾಧಿಕಾರಿಗಳು ಹಾಜರಿದ್ದರು.ಸರ್ಕಾರಿ ಶಾಲಾ ಮಕ್ಕಳು ಮತ್ತು ಶಿಕ್ಷಕರ ಕೌಶಲ್ಯಾಭಿವೃದ್ಧಿಗೆ ಶ್ರಮಿಸುತ್ತಿರುವ ಎಚ್.ಎನ್.ದೇವರಾಜು ಅವರು ಮಾದರಿ ಶಿಕ್ಷಕರಾಗಿದ್ದು, ಶಿಕ್ಷಣದ ಗುಣಮಟ್ಟ ಸುಧಾರಣೆಗೆಹತ್ತು ಹಲವು ಯೋಜನೆಗಳನ್ನು ಚಿಕ್ಕಮಂಡ್ಯ ಪ್ರೌಢಶಾಲೆಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಸರ್ಕಾರಿ ಶಾಲೆಯ ಕಡೆಗೆ ಗ್ರಾಮೀಣ ಮಕ್ಕಳ ಆಸಕ್ತಿ ಹೆಚ್ಚಿಸಿರುವುದನ್ನು ಗಮನಿಸಿ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಘೋಷಿಸಿದೆ. ಈಗ ನಮ್ಮ ಶಾಲೆಗೆ ನಗದು ಬಹುಮಾನ ಘೋಷಣೆಯಾಗಿರುವುದು ಸಂತಸ ತಂದಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ.ಮಹೇಶ್ ತಿಳಿಸಿದ್ದಾರೆ.
4ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಮೇಲುಕೋಟೆ:
ಮೇಲುಕೋಟೆ ಗ್ರಾಪಂ 4ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದೆ.ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಭವಾನಿಹರಿಧರ್ ಉಪಾಧ್ಯಕ್ಷ ಜಿ.ಕೆಕುಮಾರ್ ಪಿಡಿಒ ರಾಜೇಶ್ವರ್‌ರಿಗೆ ಗಾಂಧಿಗ್ರಾಮ ಪುರಸ್ಕಾರದ ಫಲಕ ಮತ್ತು 5 ಲಕ್ಷ ರು. ಚೆಕ್ ವಿತರಿಸಿದ್ದಾರೆ.
ಗ್ರಾಪಂ ಹಿಂದಿನ ಪಿಡಿಒ ತಮ್ಮಣ್ಣ ಹಾಗೂ ಹಾಲಿ ಪಿಡಿಒ ರಾಜೇಶ್ವರ್ ಅವಧಿಯಲ್ಲಿ ತಲಾ ಎರಡು ಸಲ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಒಟ್ಟಾರೆ ನಾಲ್ಕು ಸಲ ಪ್ರಶಸ್ತಿಪಡೆದಿದೆ.ಯೋಗಾನರಸಿಂಹಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಎಸ್.ನಾರಾಯಣಭಟ್ಟರ್ ಅಧ್ಯಕ್ಷರಾಗಿದ್ದ ವೇಳೆ ಎರಡು ವರ್ಷ ಸೋಮಶೇಖರ್ ಅಧ್ಯಕ್ಷರಾಗಿದ್ದ ವೇಳೆ ಗ್ರಾಪಂ ಎರಡು ವರ್ಷ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
ಗ್ರಾಪಂನಲ್ಲಿ ಆನ್‌ಲೈನ್, ಸಕಾಲ ಸೇವೆಗಳು, ಸಾರ್ವಜನಿಕರಿಗೆ ಸವಲತ್ತುಗಳ ವಿತರಣೆ, ಯೋಜನೆಗಳ ಅನುಷ್ಠಾನ, ಗ್ರಾಮಸಭೆ, ವಿಶೇಷಸಭೆ, ವಾರ್ಡಸಭೆ ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ ಕೆಡಿಪಿ ಸಭೆಗಳನ್ನು ಪಂಚತಂತ್ರ 2.0 ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಸಂಬಂಧ ಹಾಗೂ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸುವುದೂ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಟಾನದ ರ್‍ಯಾಂಕಿಂಗ್ ಆಧಾರದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ.