ಡಾ.ಸುಧಾಕರ್‌ಗೆ ನೆಲಮಂಗಲ ಕ್ಷೇತ್ರದಲ್ಲಿ ೨೫ ಸಾವಿರ ಲೀಡ್‌

| Published : Apr 29 2024, 01:41 AM IST

ಡಾ.ಸುಧಾಕರ್‌ಗೆ ನೆಲಮಂಗಲ ಕ್ಷೇತ್ರದಲ್ಲಿ ೨೫ ಸಾವಿರ ಲೀಡ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ಲೀಡ್ ನೀಡುತ್ತೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹೇಳಿದರು.

ದಾಬಸ್‌ಪೇಟೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ಲೀಡ್ ನೀಡುತ್ತೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹೇಳಿದರು. ಸೋಂಪುರ ಹೋಬಳಿಯ ತಾಲೂಕು ಅಧ್ಯಕ್ಷ ಸ್ವಗ್ರಾಮ ಕೆಂಗಲ್‌ನಲ್ಲಿ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಸ್ಥಳೀಯವಾಗಿ ನಮ್ಮ ಎರಡು ಪಕ್ಷಕ್ಕೆ ಆನೆಬಲ ಬಂದಂತಾಗಿದೆ, ಸೋಂಪುರ ಹೋಬಳಿಯಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತದೆ. ಮೈತ್ರಿ ಅಭ್ಯರ್ಥಿ ಗೆಲುವು ಖಚಿತ. ತಾಲೂಕಾದ್ಯಂತ ಮತದಾರರಲ್ಲಿ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಈ ಚುನಾವಣೆಯಿಂದ ಕಂಡುಬಂದಿದೆ. ನಮ್ಮ ಕೆಂಗಲ್ ಬೂತ್ ನಲ್ಲೂ ಶೇ.80 ಮತ ಬಿಜೆಪಿಗೆ ಬಿದ್ದಿದೆ ಎಂದರು.

ನನ್ನ ಮಾತಿಗೆ ಬದ್ದನಿದ್ದೇನೆ: ನೆಲಮಂಗಲ ತಾಲೂಕಿನಲ್ಲಿ ಡಾ.ಕೆ.ಸುಧಾಕರ್ ಅವರಿಗೆ 25 ಸಾವಿರ ಮತಗಳ ಲೀಡ್ ನೀಡುತ್ತೇವೆ. ಇಷ್ಟು ಲೀಡ್ ಬರದೇ ಇದ್ದರೆ ನಿಮ್ಮ ಮನೆಯ ಗೇಟ್ ಕಾಯುತ್ತೇನೆಂದು ಶಾಸಕರಿಗೆ ಹಾಕಿರುವ ಛಾಲೆಂಜ್‌ಗೆ ಈಗಲೂ ಬದ್ದನಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಹೊನ್ನೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕೇಗೌಡ, ಶಿವಾನಂದ, ಚಂದ್ರಣ್ಣ, ನಿರ್ಮಾಪಕ ನಾಗರಾಜು, ಸಿದ್ದರಾಜು, ಹರೀಶ್, ಕುಮಾರ್ ಕಾರ್ಯಕರ್ತರಿದ್ದರು. (ಫೋಟೋ ಪ್ಯಾನಲ್‌ನಲ್ಲಿ ಬಳಸಿ)

ಸೋಂಪುರ ಹೋಬಳಿಯ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಸ್ವಗ್ರಾಮದ ಕೆಂಗಲ್‌ನಲ್ಲಿ ಬೆಂಬಲಿಗರೊಂದಿಗೆ ಮತ ಚಲಾಯಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಹೊನ್ನೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕೇಗೌಡ, ಶಿವಾನಂದ, ಚಂದ್ರಣ್ಣ, ನಿರ್ಮಾಪಕ ನಾಗರಾಜು, ಸಿದ್ದರಾಜು, ಹರೀಶ್, ಕುಮಾರ್ ಕಾರ್ಯಕರ್ತರಿದ್ದರು.