ಸಾರಾಂಶ
ಉತ್ತರ ಕನ್ನಡ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಿ.13.14,15ರಂದು ದಾಂಡೇಲಿ ನಗರದ ಹಳೆ ನಗರ ಸಭೆ ಮೈದಾನದಲ್ಲಿ ಆಯೋಜಿಸುವ ಬಗ್ಗೆ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪಮಾನಂದ, ಹಳಿಯಾಳ ತಹಶೀಲ್ದಾರ್ ಸೋಮನಕಟ್ಟೆ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ದಾಂಡೇಲಿ
ಉತ್ತರ ಕನ್ನಡ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಿ.13.14,15ರಂದು ದಾಂಡೇಲಿ ನಗರದ ಹಳೆ ನಗರ ಸಭೆ ಮೈದಾನದಲ್ಲಿ ಆಯೋಜಿಸುವ ಬಗ್ಗೆ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪಮಾನಂದ, ಹಳಿಯಾಳ ತಹಶೀಲ್ದಾರ್ ಸೋಮನಕಟ್ಟೆ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ದಾಂಡೇಲಿ ತಹಶೀಲ್ದಾರ್, ಗೌರವ ಉಪಾಧ್ಯಕ್ಷರಾಗಿ ಹಳಿಯಾಳ ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳ ನೇಮಿಸಲಾಯಿತು. ಸಂಘಟನಾ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ ಮತ್ತು ಬಿಜೆಪಿ ಮಂಡಲದ ಅಧ್ಯಕ್ಷ ಬದುವಂತಗೌಡ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಂದೇಶ್ ಜೈನ್, ವೇದಿಕೆ ನಿರ್ವಹಣಾ ಸಮಿತಿ, ಮೆರವಣಿಗೆ ನಿರ್ವಹಣಾ ಸಮಿತಿ, ಹಣಕಾಸು ಸಮಿತಿ, ಸಾಂಸ್ಕೃತಿಕ ಸಮಿತಿಗೆ ಅಧ್ಯಕ್ಷರನ್ನು ನೇಮಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಮೈದಾನದಲ್ಲಿ ಸಮ್ಮೇಳನ ನಡೆಯಲಿರುವ ಕಾರಣ ಪಾರ್ಕಿಂಗ್ ಸಮಸ್ಯೆ ನಿರ್ವಹಣೆಗೆ ಪೊಲೀಸ್ ಇಲಾಖೆ ಸಹಕಾರ ಕೋರಿದರು.ದಾಂಡೇಲಿ ನಗರಸಭೆ ಅಧ್ಯಕ್ಷ, ಅಶ್ಪಾಕ್ ಶೇಖ್, ದಾಂಡೇಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ. ಹಾಮಮನಿ, ವಿಲಾಸ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಪೌರಾಯುಕ್ತ ವಿವೇಕ ಬನ್ನೆ, ಎಸಿಎಫ್ ಸಂತೋಷ ಚವ್ಹಾಣ ಮಾತನಾಡಿ ಸಮ್ಮೇಳನ ಯಶಸ್ವಿ ಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪಿಐ ಮಾನೆ, ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದೀಪಕ್ ನಾಯಕ್, ಪಿಎಸ್ಐಗಳಾದ ಅಮೀನ್ ಸಾಬ್ ಅತ್ತಾರ್, ಜಗದೀಶ್ ನಾಯ್ಕ್, ಸಿ.ಆರ್.ಪಿ ಲಲಿತಾ, ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ, ಕೀರ್ತಿ ಗಾಂವಕರ, ಅನೀಲ್ ದಂಡಗಲ್, ಅನೀಲ್ ನಾಯಕರ್, ಟಿ.ಎಸ್. ಬಾಲಮಣಿ, ಶ್ರೀಮಂತ ಮದರಿ, ಫೀರೋಜ್ ಪಿರಜಾದೆ, ರವಿ ಸುತಾರ್, ರೇಣುಕಾ ಬಂದಮ್, ಭಾಗ್ಯಶ್ರೀ ಮನ್ನೂರ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))