ಸಮುದಾಯಭವನ ನಿರ್ಮಿಸಿದ ದಾನಿಗಳಿಗೆ ಶಾಸಕ ಡಿ. ರವಿಶಂಕರ್ ಸನ್ಮಾನಿಸಲಿದ್ದು, ಮಾಜಿ ಸಚಿವ ಸಾ.ರಾ. ಮಹೇಶ್ ಸಾಧಕರನ್ನು ಗೌರವಿಸಲಿದ್ದು,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ತಾಲೂಕು ಅಖಿಲ ನಾಮಧಾರಿ ಗೌಡರ ಭವನದ 25 ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ. 11 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್. ಅಶೋಕ್‌ ಕುಮಾರ್ ಹೇಳಿದರು.

ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಅಖಿಲ ನಾಮಧಾರಿ ಗೌಡರ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು.

ಸಮುದಾಯಭವನ ನಿರ್ಮಿಸಿದ ದಾನಿಗಳಿಗೆ ಶಾಸಕ ಡಿ. ರವಿಶಂಕರ್ ಸನ್ಮಾನಿಸಲಿದ್ದು, ಮಾಜಿ ಸಚಿವ ಸಾ.ರಾ. ಮಹೇಶ್ ಸಾಧಕರನ್ನು ಗೌರವಿಸಲಿದ್ದು, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪುರಸ್ಕರಿಸಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರಿಗೆ ಕೆ. ವಿವೇಕಾನಂದ ಗೌರವಿಸುವರು ಎಂದು ಅವರು ತಿಳಿಸಿದರು.

ಮುಖ್ಯಅತಿಥಿಗಳಾಗಿ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಅಖಿಲ ನಾಮಧಾರಿ ಗೌಡರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಗೋವಿಂದರಾಜು ಭಾಗವಹಿಸುವರು ಎಂದರು.

ಅತಿಥಿಗಳಾಗಿ ಅಖಿಲ ನಾಮಧಾರಿ ಗೌಡರ ಸಂಘದ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಡಿ. ಸುಂದರದಾಸ್, ಚನ್ನರೇವಣ್ಣ, ಸಿ.ಜೆ. ನಾಗರಾಜು, ತಾಲೂಕು ಸಂಘದ ಮಾಜಿ ಅಧ್ಯಕ್ಷರಾದ ವೈ.ಎಸ್. ವಸಂತ್‌ ಕುಮಾರ್, ಕೆ.ಆರ್. ರಾಜಣ್ಣ, ಕೆ.ವಿ. ನೀಲಕಂಠೇಗೌಡ ಮತ್ತು ಎನ್.ಎ. ರಾಮಸ್ವಾಮಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ನಂತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದ್ದು ಸಮಾಜದ ಸರ್ವರೂ ಮತ್ತು ಸಂಘದ ಸದಸ್ಯರು ಭಾಗವಹಿಸುವಂತೆ ಕೋರಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭೆ ಸದಸ್ಯ ನಟರಾಜು, ಸಮಾಜ ಸೇವಕ ಕೆ.ಎಲ್. ಹೇಮಂತ್ ಮಾತನಾಡಿದರು.

ಕ್ಯಾಲೆಂಡರ್ ಬಿಡುಗಡೆ- ತಾಲೂಕು ಅಖಿಲ ನಾಮಧಾರಿ ಸಂಘದ ವತಿಯಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ಕೆ.ಆರ್. ಗಿರೀಶ್, ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಕೃಷ್ಣೇಗೌಡ, ನಿಕಟ ಪೂರ್ವ ಕಾರ್ಯದರ್ಶಿ ಎಂ.ಆರ್. ಪುಟ್ಟರಾಜು, ನಿರ್ದೇಶಕರಾದ ಎಸ್. ರುಕ್ಮಾಂಗದ, ಎನ್.ಡಿ. ಗೋವಿಂದರಾಜು, ಕೆ.ಎಸ್. ಸುಮಂತ್, ಕೆ.ಬಿ. ಪ್ರಕಾಶ್, ಕೆ.ಎನ್. ನಂಜೇಗೌಡ, ಜಯಪ್ರಕಾಶ್, ಈಶ್ವರ್, ಡಿ. ನಟರಾಜು, ಎಂ.ಪಿ. ನಂಜುಂಡ, ಪ್ರದೀಪ್‌ ಮಾರ್ ಇದ್ದರು.

------------------