ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 6000 ಸಸಿಗಳನ್ನು ರೈತರಿಗೆ ವಿತರಣೆಗಾಗಿ ಬೆಳೆಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 4000 ಸಸಿಗಳನ್ನು ರೈತರಿಗೆ ವಿತರಣೆಗಾಗಿ ಬೆಳೆಸಲಾಗಿದೆ.
ಶರಣು ಸೊಲಗಿ
ಮುಂಡರಗಿ: ರೈತರ ಹೊಲಗಳಲ್ಲಿ ಗಿಡಗಳನ್ನು ಹಚ್ಚಿಕೊಳ್ಳಲು ಅವಕಾಶವಿದ್ದು, ಜಮೀನುಗಳ ಹಸಿರೀಕರಣಕ್ಕಾಗಿ ಹಾಗೂ ನಗರ ಸೌಂದರ್ಯಕ್ಕಾಗಿ ಅಲ್ಲಲ್ಲಿ ಗಿಡಮರಗಳನ್ನು ಬೆಳೆಸಲು ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆಯು ಕೊರ್ಲಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ 2026-27ನೇ ಸಾಲಿಗೆ ನೆಡುತೋಪು ನಿರ್ಮಾಣಕ್ಕಾಗಿ 26560 ವಿವಿಧ ಸಸಿಗಳನ್ನು ಬೆಳೆಸಿದ್ದಾರೆ.ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆಯ ಕೊರ್ಲಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ ಹೊಂಗೆ, ಆಲ, ಅರಳಿ, ಅತ್ತಿ, ಮಹಾಗನಿ, ಸಿಹಿ ಹುಣಸೆ, ನೇರಳೆ, ಚೆರ್ರಿ, ಕಾಡು ಬಾದಾಮಿ, ಬಸವನಪಾದ, ಗುಲ್‌ಮೋಹರ್, ತಪ್ಸಿ, ಬೇವು, ಸಿಲ್ವರ್ ವೋಕ್, ಹುಣಸೆ, ಸಾಗವಾನಿ, ಹೊಳೆಮತ್ತಿ, ಬೀಟೆ ಸೇರಿದಂತೆ ಒಟ್ಟು 26560 ಸಸಿಗಳನ್ನು ಬೆಳೆಸಲಾಗಿದೆ.
ಸಾಮಾಜಿಕ ಅರಣ್ಯ ಯೋಜನೆಯಡಿ 6300 ಸಸಿಗಳು ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 1500 ಸಸಿಗಳನ್ನು ಹಾಗೂ ಸಾಮಾಜಿಕ ಅರಣ್ಯ ಯೋಜನೆಯಡಿ 1000 ಸಸಿಗಳು ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 3000 ಸಸಿಗಳನ್ನು 2026- 27ನೇ ಸಾಲಿನಲ್ಲಿ ನೆಡುತೋಪು ನಿರ್ಮಾಣ ಮಾಡಲು ಉಪಯೋಗಿಸಲಾಗುವುದು.ಎಚ್.ಕೆ. ಯೋಜನೆಯಡಿ 400 ಸಸಿಗಳು ಪರಿಸರ ದಿನಾಚರಣೆ, ವನಮಹೋತ್ಸವ ಮತ್ತು ಇತರೆ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಶಾಲಾ- ಕಾಲೇಜುಗಳಿಗೆ ಮತ್ತು ಸಾರ್ವಜನಿಕ ವಿತರಣೆಗಾಗಿ ಉಪಯೋಗಿಸಲು ಬೆಳೆಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 500 ಸಸಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಣೆಗಾಗಿ ಉಪಯೋಗಿಸಲು ಬೆಳೆಸಲಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 6000 ಸಸಿಗಳನ್ನು ರೈತರಿಗೆ ವಿತರಣೆಗಾಗಿ ಬೆಳೆಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 4000 ಸಸಿಗಳನ್ನು ರೈತರಿಗೆ ವಿತರಣೆಗಾಗಿ ಬೆಳೆಸಲಾಗಿದೆ. ಆರ್‌ಎಸ್‌ಪಿಡಿ ಯೋಜನೆಯಡಿ 1750 ಸಸಿಗಳನ್ನು ರಿಯಾಯಿತಿ ದರದಲ್ಲಿ ಪ್ರತಿ ಸಸಿಗೆ ₹6ರಂತೆ ರೈತರಿಗೆ ಮಾರಾಟ ಮಾಡಲು ಅವಕಾಶವಿದೆ. ಆರ್‌ಎಸ್‌ಪಿಡಿ ಯೋಜನೆಯಡಿ 1750 ಸಸಿಗಳನ್ನು ರಿಯಾಯಿತಿ ದರದಲ್ಲಿ ಪ್ರತಿ ಸಸಿಗೆ ₹3ರಂತೆ ರೈತರಿಗೆ ಮಾರಾಟ ಮಾಡಲು ಅವಕಾಶವಿದೆ.ನಮ್ಮ ಇಲಾಖೆ ಕೊರ್ಲಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ 2026- 27ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಹಾಗೂ ಆರ್‌ಎಸ್‌ಪಿಡಿ ಯೋಜನೆಯಲ್ಲಿ ಸಾರ್ವಜನಿಕ ಜಾಗಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಸಿಗಳನ್ನು ನೆಡುವುದಕ್ಕಾಗಿ 26560 ಸಸಿಗಳನ್ನು ಬೆಳೆಸಲಾಗಿದೆ. ರೈತರು ಹಾಗೂ ಸಾರ್ವಜನಿಕರು ಅವುಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ವಲಯ ಅರಣ್ಯಾಧಿಕಾರಿ ಸುನಿತಾ ಬಿ.ಎಸ್. ತಿಳಿಸಿದರು.