2663 ಕೋಟಿಯಲ್ಲಿ ಡಿಸ್ನಿಲ್ಯಾಂಡ್‌ ರೀತಿ ಕೆಆರೆಸ್‌ ಅಭಿವೃದ್ಧಿ: ಸಚಿವ ಸಂಪುಟ ಸಭೆ ಅನುಮೋದನೆ

| Published : Jul 27 2024, 12:52 AM IST / Updated: Jul 27 2024, 08:07 AM IST

2663 ಕೋಟಿಯಲ್ಲಿ ಡಿಸ್ನಿಲ್ಯಾಂಡ್‌ ರೀತಿ ಕೆಆರೆಸ್‌ ಅಭಿವೃದ್ಧಿ: ಸಚಿವ ಸಂಪುಟ ಸಭೆ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿಖ್ಯಾತ ಕೃಷ್ಣರಾಜಸಾಗರ ಬಂದಾವನ (ಕೆಆರ್‌ಎಸ್) ಉದ್ಯಾನವನ್ನು ಪಿಪಿಪಿ ಮಾದರಿಯಲ್ಲಿ 2,663 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಮೇರಿಕಾದ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 ಬೆಂಗಳೂರು : ವಿಶ್ವವಿಖ್ಯಾತ ಕೃಷ್ಣರಾಜಸಾಗರ ಬೃಂದಾವನ (ಕೆಆರ್‌ಎಸ್) ಉದ್ಯಾನವನ್ನು ಪಿಪಿಪಿ ಮಾದರಿಯಲ್ಲಿ 2,663 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಮೇರಿಕಾದ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಸ್ತಾವನೆಯನ್ನು ಮಂಡಿಸಿದರು.

2018ರಲ್ಲೇ ರಾಜ್ಯ ಸರ್ಕಾರದಿಂದ 198 ಎಕರೆ ವಿಸ್ತೀರ್ಣದ ಕೆಆರ್‌ಎಸ್‌ ಬೃಂದಾವನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು. ವಿನ್ಯಾಸ ಮತ್ತಿತರ ವೆಚ್ಚಗಳಿಗೆ 5 ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಒದಗಿಸಲಾಗಿತ್ತು. ಕೆಆರ್‌ಎಸ್‌ ಆಕರ್ಷಣೆ ಕಡಿಮೆಯಾಗುತ್ತಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಸಮಗ್ರ ಅಭಿವೃದ್ಧಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 34.5 ವರ್ಷಗಳ ಗುತ್ತಿಗೆ ಅವಧಿಗೆ ಪಿಪಿಪಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಬಳಿಕ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು ಎಂದು ತಿಳಿದುಬಂದಿದೆ.

ಜಲಕ್ರೀಡೆ ಸೇರಿ ಹಲವು ಪ್ರಸ್ತಾಪ:ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್‌, ಜಲ ಸಂಪನ್ಮೂಲ ಇಲಾಖೆಯಿಂದ ಮಂಡ್ಯ ಜಿಲ್ಲೆ ಕೆಆರ್‌ಎಸ್ ಬೃಂದಾವನವನ್ನು ಪಿಪಿಪಿ‌ ಮಾದರಿಯಲ್ಲಿ 2600 ಕೋಟಿ ರು. ವೆಚ್ಚದಲ್ಲಿ‌ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ. ಜಲಕ್ರೀಡೆ ಒಳಗೊಂಡಂತೆ ಡಿಸ್ನಿವರ್ಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಾಸ್ಟರ್ ಪ್ಲಾನ್‌ನಲ್ಲಿ ಹೆಲಿ ಪ್ಯಾಡ್, ಪಾರ್ಕಿಂಗ್, ಕ್ಯಾಸ್ಕೇಡ್‌, ಕೆ.ಆರ್‌. ವೃತ್ತ ಅಭಿವೃದ್ಧಿ, ಎಂಟ್ರಿ ಆರ್ಚ್‌, ಟಿಕೆಟ್‌ ಪ್ಲಾಜಾ ಸೇರಿದಂತೆ ಹಲವು ನಿರ್ಮಾಣಗಳನ್ನು ಒಳಗೊಂಡಿರಲಿದೆ ಎಂದು ಹೇಳಿದರು.