ಸಾರಾಂಶ
- ಮನೆಗಳಿಂದ ರೊಟ್ಟಿ ಬುತ್ತಿ ತಂದು ಸಾಮೂಹಿಕ ಭೋಜನ ಮಾಡಲಿರುವ ಬಂಧುಗಳು
- ಶಾಸಕರಾದ ಬಿ.ಕೆ.ಸಂಗಮೇಶ್, ರುದ್ರೇಗೌಡ ಮತ್ತಿತರ ಗಣ್ಯರು ಭಾಗಿ- ಶಿವಾನಂದ ಬಸವರಾಜ ಮೆಟ್ಯಾಲ, ಆದ್ಯಂತ್ ನಂದೀಶ್‌ಗೆ ಸನ್ಮಾನ, ಎಚ್.ಎಲ್. ಷಡಾಕ್ಷರಿಗೆ ಅಭಿನಂದನೆ
- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಬಸವ ಕೇಂದ್ರದ ವತಿಯಿಂದ ಡಿ.18ರಿಂದ 20ರವರೆಗೆ ಚಿಂತನ ಕಾರ್ತಿಕ ಸಮಾರೋಪ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 286ನೇ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಿ.181ರಂದು ಸಂಜೆ 6 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಚಿಂತನ ಕಾರ್ತಿಕದ ಸಮಾರೋಪ ಮತ್ತು ಪ್ರಶಸ್ತಿ ಸಮಾರಂಭ ನಡೆಯಲಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು ಎಂದರು.
ಶಾಸಕ ಬಿ.ಕೆ. ಸಂಗಮೇಶ್, ವಿಧಾನ ಪರಿಷತ್ತು ಸದಸ್ಯರಾದ ಎಸ್.ರುದ್ರೇಗೌಡ, ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಹಾಗೂ ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಡಾ. ಧನಂಜಯ ಸರ್ಜಿ, ನಾಗರಾಜ್ ಕಂಕಾರಿ, ಎಚ್.ಸಿ. ಯೋಗೀಶ್, ಎಸ್.ಪಿ. ದಿನೇಶ್, ಅನಿತಾ ರವಿಶಂಕರ್, ಈ.ವಿಶ್ವಾಸ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಧೀರರಾಜ್ ಹೊನ್ನವಿಲೆ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪತ್ರಕರ್ತ, ಯುವ ಪ್ರಶಸ್ತಿ ಪುರಸ್ಕೃತ ಶಿವಾನಂದ ಬಸವರಾಜ ಮೆಟ್ಯಾಲ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿದ ಆದ್ಯಂತ್ ನಂದೀಶ್ ಅವರನ್ನು ಸನ್ಮಾನಿಸಲಾಗುವುದು. ಸಹಕಾರ ರತ್ನ ಪ್ರಶಸ್ತಿ ಪಡೆದ ಎಚ್.ಎಲ್. ಷಡಾಕ್ಷರಿ ಅವರನ್ನು ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು.
ಡಿ.19ರಂದು ಸಂಜೆ 6.30ಕ್ಕೆ ಬಸವ ಕೇಂದ್ರದಲ್ಲಿ ಗಣಪರ್ವ ಏರ್ಪಡಿಸಿದ್ದು, ಇದರಲ್ಲಿ ಚೌಕಿ ಮಠ ಶ್ರೀ ನೀಲಕಂಠಸ್ವಾಮಿ, ಸಿದ್ದರಹಳ್ಳಿಯ ಮಲ್ಲಿಕಾರ್ಜುನಸ್ವಾಮಿ, ಗರಡಿ ಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ, ವಿರಕ್ತಮಠದ ಚನ್ನಬಸವ ಸ್ವಾಮಿ, ತಂಗನಹಳ್ಳಿಯ ಬಸವ ಮಹಾಲಿಂಗಸ್ವಾಮಿ ಸಾನ್ನಿಧ್ಯ ವಹಿಸಲಿದ್ದು, ಸಮಾಜದ ಬಾಂಧವರು ತಮ್ಮ ಮನೆಗಳಿಂದ ರೊಟ್ಟಿ ಬುತ್ತಿ ತಂದು ಸಾಮೂಹಿಕ ಭೋಜನ ಮಾಡುವರು ಎಂದು ತಿಳಿಸಿದರು.ಶರಣ ಸಂಗಮ:
ದತ್ತಿದಾನಿ ಎಚ್.ಎಂ. ಚಂದ್ರಶೇಖರಪ್ಪ ಮಾತನಾಡಿ, ಹುಣಸಘಟ್ಟದ ಸಾಹುಕಾರ್ ಮಲ್ಲಪ್ಪನವರ ವಂಶಸ್ಥರು, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಮತ್ತು ಕುಟುಂಬದವರ ದತ್ತಿ ದಾನದಡಿಯಲ್ಲಿ ಡಿ.20ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ 286ನೇ ಶರಣ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸುವರು. ವಿಶೇಷ ಆಹ್ವಾನಿತರಾಗಿ ಈಶ್ವರಿ ವಿಶ್ವವಿದ್ಯಾಲಯದ ಡಾ. ಮೃತ್ಯಂಜಯ ಅಣ್ಣಾಜಿ, ಡಾ. ಬಸವರಾಜ ರಾಜಋಷಿ ಭಾಗವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಹೆಚ್.ಎಸ್. ಶಿವಪ್ರಕಾಶ ಭಾರತೀಯ ಸಂಸ್ಕತಿ ಮತ್ತು ಯುವಜನಾಂಗ ಕುರಿತು ಉಪನ್ಯಾಸ ನೀಡುವರು. ವಚನ ಗಾಯನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಪ್ರಮುಖರಾದ ರುದ್ರಮುನಿ ಸಜ್ಜನ್, ಎ.ಎಸ್. ಚಂದ್ರಶೇಖರ್, ಎಚ್.ಸಿ. ಯೋಗೀಶ್, ಪಿ.ಚಂದ್ರಪ್ಪ, ಆರ್. ಸ್ವಾಮಿ, ಚಂದ್ರಶೇಖರ್ ಇದ್ದರು.- - - -16ಎಸ್‌ಎಂಜಿಕೆಪಿ03: ಡಾ.ಬಸವ ಮರುಳಸಿದ್ದ ಸ್ವಾಮೀಜಿ