ಗಂಗಾವತಿ ನ್ಯಾಯಾಲಯದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಉದ್ಘಾಟಿಸಿದರು. ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆಗಿ ಆಗಮಿಸಿದ ರೋಶನಿ ಪಾಟೀಲ್ ಅವರನ್ನು ವಕೀಲರ ಸಂಘದಿಂದ ಸ್ವಾಗತಿಸಲಾಯಿತು.
ಗಂಗಾವತಿ: ಇಲ್ಲಿಯ ನ್ಯಾಯಾಲಯದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಂಗಾವತಿ ನ್ಯಾಯಾಲಯದಲ್ಲಿ ಉದ್ಘಾಟನೆಯಾದ ನೂತನ ನ್ಯಾಯಾಲಯ ಒಳಗೊಂಡು ಈಗ ಒಟ್ಟು ಐವರು ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದು, 11 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಬಾಕಿ ಇವೆ. ನ್ಯಾಯಾಲಯ ಉದ್ಘಾಟನೆಯಿಂದ ಗಂಗಾವತಿ ಭಾಗದ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಅವರು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ವಿಶೇಷ ಮುತುವರ್ಜಿಯಿಂದ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ನ್ಯಾಯಾಲಯವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಮತ್ತು ಅತಿ ಶೀಘ್ರದಲ್ಲಿ ಕನಕಗಿರಿ ನ್ಯಾಯಾಲಯ ಸಂಚಾರಿ ಪೀಠ ಕಾರ್ಯ ಆರಂಭಿಸಲು ಶ್ರಮಿಸಿದಕ್ಕಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ವಕೀಲರ ಸಂಘದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ನೂತನ ಕಾರಟಗಿ ನ್ಯಾಯಾಲಯದ ಶಂಕುಸ್ಥಾಪನೆ, ಕಾರಟಗಿಯ ನ್ಯಾಯಾಲಯಕ್ಕೆ ಶಾಶ್ವತ ನ್ಯಾಯಾಧೀಶರ ನೇಮಕ, ಗಂಗಾವತಿಯ ಹಳೆಯ ಕೋರ್ಟಿನ ನವೀಕರಣ, ಎರಡನೇ ಹೆಚ್ಚುವರಿ ಹಿರಿಯ ಶ್ರೇಣಿ ನಾಯಾಲಯ ಸ್ಥಾಪನೆ ಮತ್ತು ನೂತನ ವಕೀಲರ ಭವನಕ್ಕೆ ಬೇಡಿಕೆ ಪ್ರಸ್ತಾಪಿಸಿದರು.ಇದಕ್ಕೆ ಸ್ಪಂದಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಧೀಶರು, ಆದಷ್ಟು ಬೇಗ ಎಲ್ಲ ಬೇಡಿಕೆಗಳನ್ನು ಉಚ್ಚ ನ್ಯಾಯಾಲಯದ ಗಮನಕ್ಕೆ ತರುತ್ತೇನೆ ಮತ್ತು ಎಲ್ಲ ಬೇಡಿಕೆಗಳು ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆಗಿ ಆಗಮಿಸಿದ ರೋಶನಿ ಪಾಟೀಲ್ ಅವರನ್ನು ವಕೀಲರ ಸಂಘದಿಂದ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಗಂಗಾವತಿ ನ್ಯಾಯಾಲಯದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇದಮೂರ್ತಿ ಬಿ.ಎಸ್., ಹಿರಿಯ ಶ್ರೇಣಿ ನ್ಯಾಯಾಧೀಶರಾದ ಜಿ.ಬಿ. ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆದ ಮೇಘಾ ಸೋಮಣ್ಣನವರ್, ಎಕ್ಸಿಕ್ಯೂಟಿವ್ ಎಂಜಿನಿಯರ್ ಕೊಪ್ಪಳ ಹೇಮಂತ್ ರಾಜ್, ಸಂಘದ ಅಧ್ಯಕ್ಷರಾದ ಶರಣಬಸಪ್ಪ ನಾಯಕ್, ಉಪಾಧ್ಯಕ್ಷ ಪ್ರಕಾಶ್ ಕುಸುಬಿ, ಖಜಾಂಚಿ ಪುಷ್ಪಾ ಶ್ರೀನಿವಾಸ್, ಸರ್ಕಾರಿ ವಕೀಲೆಯಾದ ಸೈದ ಬಾನು, ಹಿರಿಯ ವಕೀಲರಾದ ಸಿದ್ದನಗೌಡ ಪಾಟೀಲ್, ಎಚ್. ಮಹಾಬಲೇಶ್, ಡಿ.ಎ. ಹಾಲಸಮುದ್ರ, ನಾಗನಗೌಡ ಪಾಟೀಲ್, ವೈಜನಾಥ ಸ್ವಾಮಿ, ಕೆ.ಆರ್. ದೇಶಪಾಂಡೆ, ಪಂಪನಗೌಡ, ಆರ್.ಕೆ. ನೆರಬೆಂಚಿ, ಹನುಮಂತರಾವ್, ಶಿವರಾಮಗೌಡ, ಕೆ. ಕೃಷ್ಣಪ್ಪ, ವಿ.ಎನ್. ಪಾಟೀಲ್, ಎಸ್.ಕೆ. ದಂಡಿನ್, ಪಿ.ವಿ. ಪಾಟೀಲ್, ಶ್ರೀಧರ ನಾಯಕ್, ರಮೇಶ್ ಚಿಲ್ಕೂರಿ, ಮಹಿಳಾ ನ್ಯಾಯವಾದಿಗಳಾದ ಅಕ್ಕಮಹಾದೇವಿ, ಕವಿತಾ ಗುರುಮೂರ್ತಿ, ರಾಜೇಶ್ವರಿ, ಮಾಲತಿ, ರೋಜಾ ಮತ್ತು ಇತರರು ಭಾಗವಹಿಸಿದ್ದರು.