ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 3.12 ಲಕ್ಷ ರು. ಲಾಭ: ಜಿ.ಇ.ರವಿಕುಮಾರ್

| Published : Sep 18 2024, 02:03 AM IST

ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 3.12 ಲಕ್ಷ ರು. ಲಾಭ: ಜಿ.ಇ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರೆ ಗ್ರಾಮದ ಬಳಿ ಭೂಮಿ ಖರೀದಿಸಿರುವ ಪ್ರಕರಣ ನ್ಯಾಯಾಲಯದಲ್ಲಿ ರಾಜೀಸಂಧಾನ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ. ಭೂಮಿ ಮಾಲೀಕರು ಇ-ಸ್ವತ್ತು ಮಾಡಿಸಿಕೊಟ್ಟರೆ ಭೂಮಿ ರಿಜಿಸ್ಟೇಷನ್ ಮಾಡಿಕೊಳ್ಳಲಾಗುವುದು, ಸಂಘದಿಂದ ನೀಡಿರುವ 1.30 ಕೋಟಿ ಹಣಕ್ಕೆ ವಾರ್ಷಿಕ ಬ್ಯಾಂಕ್ ಬಡ್ಡಿಯಂತೆ ನೀಡಲು ಭೂ ಮಾಲೀಕರಿಂದ ವಸೂಲಿ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಈ ಸಾಲಿನಲ್ಲಿ 9.90 ಲಕ್ಷ ವಸೂಲಾತಿ ಮಾಡಲಾಗಿದೆ. ಸಂಘವು 3.12 ಲಕ್ಷ ರು. ಲಾಭದಾಯಕವಾಗಿ ಮುಂದುವರೆದಿದೆ ಎಂದು ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾ ಭವನದಲ್ಲಿ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘದಿಂದ 31.91 ಲಕ್ಷ ರು. ಸಾಲ ಬಾಕಿ ಇದ್ದು, ಈ ಸಾಲಿನಲ್ಲಿ 5.60 ಲಕ್ಷ ಸಾಲ ನೀಡಲಾಗಿದೆ ಎಂದರು.

46 ಮಂದಿ ಷೇರುದಾರರ ಸಾಲ ಮರುಪಾವತಿ ಮಾಡಿದ್ದಾರೆ. 45 ಮಂದಿ ವಿರುದ್ಧ ಸಾಲ ವಸೂಲಾತಿ ಸಂಬಂಧ ನ್ಯಾಯಾಲಯದಲ್ಲಿ ಚೆಕ್‌ ಬೌನ್ಸ್ ಪ್ರಕರಣ ದಾಖಲಾಗಿದೆ. ಇದರಲ್ಲಿ 13 ಪ್ರಕರಣಗಳಲ್ಲಿ ಸಾಲ ಮರುಪಾವತಿಯಾಗಿದೆ. ಈ ವರ್ಷ 25 ಮಂದಿ ಸಾಲ ಬಾಕಿ ಇರುವ ಷೇರುದಾರರು ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಸಾಲವಸೂಲಾತಿ ವಿಳಂಭವಾಗುವ ಕಾರಣಕ್ಕೆ ಮಾತುಕತೆ ಮೂಲಕ ಬಗೆಹರಿಸಲಾಗುತ್ತಿದೆ ಎಂದರು.

ಚಂದ್ರೆ ಗ್ರಾಮದ ಬಳಿ ಭೂಮಿ ಖರೀದಿಸಿರುವ ಪ್ರಕರಣ ನ್ಯಾಯಾಲಯದಲ್ಲಿ ರಾಜೀಸಂಧಾನ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ. ಭೂಮಿ ಮಾಲೀಕರು ಇ-ಸ್ವತ್ತು ಮಾಡಿಸಿಕೊಟ್ಟರೆ ಭೂಮಿ ರಿಜಿಸ್ಟೇಷನ್ ಮಾಡಿಕೊಳ್ಳಲಾಗುವುದು, ಸಂಘದಿಂದ ನೀಡಿರುವ 1.30 ಕೋಟಿ ಹಣಕ್ಕೆ ವಾರ್ಷಿಕ ಬ್ಯಾಂಕ್ ಬಡ್ಡಿಯಂತೆ ನೀಡಲು ಭೂ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದರು.

ಸಂಘದಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆಗೆ ಆದೇಶಿಸಿದರೆ ಆಡಳಿತ ಮಂಡಳಿ ಸದಸ್ಯರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಸದಸ್ಯ ಕೆ.ಕುಬೇರ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರವಿಕುಮಾರ್ ಈ ವಿಚಾರವಾಗಿ ಸಹಕಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂಬುದಾಗಿ ವರದಿ ನೀಡಿದ್ದರು. ಮತ್ತೆ ಅದೇ ವಿಷಯಕ್ಕೆ ತನಿಖೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೇವೆ ಎಂದು ಸಭೆಗೆ ವಿವರಿಸಿದರು.

ಸಂಘದ ಸ್ಥಾಪನೆಯಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬಆಚರಣೆಗೆ ಕ್ರಮ ವಹಿಸುವಂತೆ ಸದಸ್ಯರು ಆಡಳಿತ ಮಂಡಳಿ ಹಾಗೂ ಕಾರ್‍ಯದರ್ಶಿಗೆ ಸಲಹೆ ನೀಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಬಿ.ಎಸ್.ಜಯರಾಮು, ಡಿ.ಹುಚ್ಚೇಗೌಡ, ಮುರುಳೀಧರ್, ಚಿಟ್ಟಿಬಾಬು, ಭಾಸ್ಕರ್, ಕಣ್ಣ, ಆದರ್ಶರಾಮು, ಜ್ಯೋತಿ ವಾಸುದೇವ್, ರೋಜ, ಎಸ್.ಬಿ.ಕೃಷ್ಣಯ್ಯ, ರೂಪವತಿ ಬಿ.ಕೆ., ಎಚ್.ಎಸ್.ಪ್ರಕಾಶ್ ಸೇರಿದಂತೆ ಅಧಿಕಾರಿ ವರ್ಗದವರು ಇದ್ದರು.