ಸಾರಾಂಶ
ದಾಬಸ್‌ಪೇಟೆ: ಸೂಪರ್ ಸೀಡ್ ಆಗಿದ್ದ ಸಂಘವನ್ನು ಕಳೆದ 30 ವರ್ಷಗಳಿಂದ ಸಮಗ್ರವಾಗಿ ಬಲಪಡಿಸಿ, ರೈತರಿಗೆ 3.76 ಕೋಟಿ ಬೆಳೆಸಾಲ, ರಸಗೊಬ್ಬರ, ಹಿಂಡಿ-ಬೂಸಾ ವಿವಿಧ ಸೌಲಭ್ಯಗಳನ್ನು ಸಂಘ ಕಲ್ಪಿಸಿಕೊಟ್ಟಿದೆ ಎಂದು ಕಂಬಾಳು ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಪ್ರಭುದೇವ್ ಹೇಳಿದರು.
ಕಂಬಾಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಲವೆಡೆ ರಸಗೊಬ್ಬರ ಅಭಾವ ಸೃಷ್ಟಿಯಾದರೂ, ನಮ್ಮ ಸಂಘ 2 ತಿಂಗಳ ಮುಂಚಿತವಾಗಿ ದಾಸ್ತಾನು ಮಾಡಿ ರೈತರಿಗೆ ಪೂರೈಸಿದ್ದೇವೆ. ಶಿವಾನಂದನಗರದಲ್ಲಿ 4ನೇ ನ್ಯಾಯಬೆಲೆ ಅಂಗಡಿ ಮುಂದಿನ ವಾರದಲ್ಲಿ ಚಾಲನೆಗೊಳ್ಳಲಿದೆ ಎಂದರು.ಸಂಘದ ಸಿಇಒ ನರಸಿಂಹಮೂರ್ತಿ, ಉಪಾಧ್ಯಕ್ಷ ನಂಜಪ್ಪ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನರಸಿಂಹಮೂರ್ತಿ, ಬಮೂಲ್ ಮಾಜಿ ನಿರ್ದೇಶಕ ತಿಮ್ಮರಾಜು, ನಿರ್ದೇಶಕರಾದ ಹೊನ್ನಗಂಗಶೆಟ್ಟಿ, ನಾರಾಯಣಪ್ಪ, ಶಿವರುದ್ರಯ್ಯ, ಮಲ್ಲೇಶಯ್ಯ, ನಂಜಪ್ಪ, ರೇಣುಕಾಪ್ರಸಾದ್, ಹನುಮಂತರಾಯಪ್ಪ, ಬೈಲನರಸಿಂಹಮೂರ್ತಿ, ಫಾಜೀಲಾಭಾನು, ಭಾಗ್ಯಮ್ಮ, ಮುಖಂಡರಾದ ವಸಂತಕುಮಾರ್, ರಾಜಣ್ಣ, ಹನುಮಂತರಾಜು, ಸಿಬ್ಬಂದಿಗಳಾದ ಚಂದ್ರಕಲಾ, ಮಂಜುನಾಥ್, ಮಂಗಳಗೌರಮ್ಮ, ಬಸವರಾಜು, ಷೇರುದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಫೋಟೋ 5 :ಕಂಬಾಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೆ.ಬಿ.ಪ್ರಭುದೇವ್ ಮಾತನಾಡಿದರು.