ಮೃತ ವಿದ್ಯಾರ್ಥಿನಿ ಕುಟುಂಬಸ್ಥರಿಗೆ ೩ ಲಕ್ಷ ರು. ಮೊತ್ತದ ಚೆಕ್ ಹಸ್ತಾಂತರ

| Published : Sep 01 2024, 01:51 AM IST

ಮೃತ ವಿದ್ಯಾರ್ಥಿನಿ ಕುಟುಂಬಸ್ಥರಿಗೆ ೩ ಲಕ್ಷ ರು. ಮೊತ್ತದ ಚೆಕ್ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಅವರು ಜು.೨ರಂದು ಆಲದಕಟ್ಟಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ವಿದ್ಯಾರ್ಥಿನಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಜೂರಾದ ರು. ೩ ಲಕ್ಷಗಳ ಚೆಕ್ ಅನ್ನು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಶಾಸಕ ಯು.ಬಿ. ಬಣಕಾರ ವಿತರಣೆ ಮಾಡಿದರು.

ಹಿರೇಕೆರೂರು: ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಅವರು ಜು.೨ರಂದು ಆಲದಕಟ್ಟಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ವಿದ್ಯಾರ್ಥಿನಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಜೂರಾದ ರು. ೩ ಲಕ್ಷಗಳ ಚೆಕ್ ಅನ್ನು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಶಾಸಕ ಯು.ಬಿ. ಬಣಕಾರ ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ಶಾಸಕ ಯು.ಬಿ.ಬಣಕಾರ, ಯಾರೊಬ್ಬರು ಆತ್ಮಹತ್ಯೆಯಂತಹ ಆಲೋಚನೆಗೆ ಮಾಡಬಾರದು. ಎಂತದೇ ನೋವುಗಳಿದ್ದರೂ ಹಂಚಿಕೊಳ್ಳಬೇಕು. ಯಾವ ಕಷ್ಟಗಳು ಶಾಶ್ವತವಲ್ಲ ಎಲ್ಲದಕ್ಕೂ ಪರಿಹಾರವಿದ್ದು, ಪರಿಹಾರ ಕಂಡುಕೊಳ್ಳುವತ್ತ ಗಮನ ನೀಡಬೇಕು ವಿನಃ ಆತ್ಮಹತ್ಯೆಯ ಆಲೋಚನೆಯನ್ನು ಮಾಡಬಾರದು. ವಿದ್ಯಾರ್ಥಿಗಳಿಗೆ ಸಾಧನೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಮುಕ್ತವಾಗಿ ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು, ಏನೇ ಕಷ್ಟಗಳಿದ್ದರೂ ಪಾಲಕರು ಗುರುಗಳ ಬಳಿ ಹೇಳಿಕೊಳ್ಳಬೇಕು ಎಂದರು. ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಚ್. ಪ್ರಭಾಕರ್‌ಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಕೆಎಂಎಫ್ ನಿರ್ದೇಶಕ ಹನುಮಗೌಡ ಬರಮಣ್ಣನವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್ ಹರಿಜನ್, ಸುರೇಶ ಸಣ್ಣನವರ, ವೀರನಗೌಡ ಬಾಳಂಬೀಡ, ಬಿದ್ದಾಡೆಪ್ಪ ಸಣ್ಣನವರ, ಭರಮಗೌಡ ಬಾಳಂಬೀಡ, ವೀರೇಶ ಬಾಳಂಬೀಡ, ಲೋಕಪ್ಪ ಸಣ್ಣನವರ, ಹನುಮಂತಪ್ಪ ಗೌಡಣ್ಣನವರ, ಶೇಕಪ್ಪ ಗೌಡಣ್ಣನವರ, ಮಲ್ಲನಗೌಡ ಬಾಳಂಬೀಡ, ಸೋಮಪ್ಪ ಪುಟ್ಟಪ್ಪನವರ, ನಾಗರಾಜ ಗೌಡಣ್ಣನವರ, ಶಿವಕುಮಾರ ಬಾಳಂಬೀಡ ಇದ್ದರು.