ಇಂಡಿಗನತ್ತ ಗ್ರಾಮದಲ್ಲಿ 10 ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ ಚಿರತೆಯ ಚಲನವಲನವು ಥರ್ಮಲ್‌ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿರತೆ ಸೆರೆಗೆ 4 ಬೋನ್‌ಗಳ ಅಳವಡಿಕೆ । ಥರ್ಮಲ್‌ ಡ್ರೋನ್‌ ಕ್ಯಾಮೆರಾದಲ್ಲಿ ಚಿರತೆ ಸಂಚಾರ ಸೆರೆ । ಪಾದಯಾತ್ರೆಗೆ ಬ್ರೇಕ್‌

---

ಕನ್ನಡಪ್ರಭ ವಾರ್ತೆ ಹನೂರು

ಇಂಡಿಗನತ್ತ ಗ್ರಾಮದಲ್ಲಿ 10 ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ ಚಿರತೆಯ ಚಲನವಲನವು ಥರ್ಮಲ್‌ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿರತೆ ಸೆರೆಗೆ 4 ಡ್ರೋನ್‌:

ಚಿರತೆಯ ಸೆರೆಗೆ 4 ಬೋನ್‌ಗಳನ್ನು ಅರಣ್ಯ ಇಲಾಖೆ ಅಳವಡಿಸಿದ್ದು, ಸ್ಥಳದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಜೊತೆಗೆ ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಥರ್ಮಲ್‌ ಡ್ರೋನ್‌ನಲ್ಲಿ ಚಿರತೆ ಓಡಾಟದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ನಾಗಮಲೆಗೆ ತೆರಳುವ ಪಾದಯಾತ್ರಿಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದ್ದಾರೆ.