ಜಿಎಎಫ್‌ಎಕ್ಸ್‌ನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ

| Published : Jan 30 2024, 02:04 AM IST / Updated: Jan 30 2024, 03:53 PM IST

Siddaramaiah
ಜಿಎಎಫ್‌ಎಕ್ಸ್‌ನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯವು 2028ರ ವೇಳೆಗೆ 30,000 ಉದ್ಯೋಗ ಸೃಷ್ಟಿ ಮೂಲಕ ಅನಿಮೇಷನ್‌ ಹಾಗೂ ಗೇಮಿಂಗ್‌, ಕಾಮಿಕ್ಸ್ ಕ್ಷೇತ್ರದ ಜಾಗತಿಕ ಲೀಡರ್‌ ಆಗುವ ಗುರಿ ಹೊಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯವು 2028ರ ವೇಳೆಗೆ 30,000 ಉದ್ಯೋಗ ಸೃಷ್ಟಿ ಮೂಲಕ ಅನಿಮೇಷನ್‌ ಹಾಗೂ ಗೇಮಿಂಗ್‌, ಕಾಮಿಕ್ಸ್ ಕ್ಷೇತ್ರದ ಜಾಗತಿಕ ಲೀಡರ್‌ ಆಗುವ ಗುರಿ ಹೊಂದಿದೆ. 

ಸರ್ಕಾರದ ಗುರಿ ಸಾಧನೆ ಹಾಗೂ ಅನಿಮೇಷನ್‌ ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಯುವಕರಿಗೆ ಈ ಸಮ್ಮೇಳನ ವೇದಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಜಿಎಎಫ್ಎಕ್ಸ್‌-2024 ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ನಾಯಕನನ್ನಾಗಿ ಮಾಡಲು ಮತ್ತು ರಾಜ್ಯವನ್ನು ಎವಿಜಿಸಿಎಕ್ಸ್‌ಆರ್‌ನ ಶ್ರೇಷ್ಠತೆಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ದೃಢವಾದ ಪ್ರತಿಭಾ ಪೂಲ್ ರಚಿಸಲು ಉದ್ದೇಶಿಸಿದ್ದೇವೆ. 

2028 ರ ವೇಳೆಗೆ ಈ ವಲಯದಲ್ಲಿ 30 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದು, ರಫ್ತು ಪ್ರಮಾಣವನ್ನು ಕನಿಷ್ಠ ಶೇ.80 ರಷ್ಟು ಹೆಚ್ಚಿಸಲು ಯೋಜಿಸಿದ್ದೇವೆ ಎಂದರು.

2012ರಲ್ಲೇ ಎವಿಜಿಸಿ (ಅನಿಮೇಷನ್‌, ವಿಜುಯಲ್‌ ಎಫೆಕ್ಟ್, ಗೇಮಿಂಗ್‌ ಮತ್ತು ಕಾಮಿಕ್) ನೀತಿಯನ್ನು ಮಾಡುವ ಮೂಲಕ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಹಾಗೂ ಸವಾಲುಗಳನ್ನು ಪರಿಹರಿಸಲು ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ಕ್ರಮ ಕೈಗೊಂಡಿತ್ತು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಜಿಎಎಫ್ಎಕ್ಸ್ ತಂತ್ರಜ್ಞಾನಗಳಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ. 

ಈ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ, ಇನ್ವೆಸ್ಟ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ನಿವೃತಿ ರೈ, ಆಕ್ಸಿಲರ್‌ ವೆಂಚರ್ಸ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ-ಬಿಟಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಏಕರೂಪ್‌ಕೌರ್‌ ಸೇರಿ ಹಲವರು ಹಾಜರಿದ್ದರು.