ಆಡಳಿತಾಧಿಕಾರಿ ಡಾ.ಗಣೇಶ್‌ ಬಾಬು ವಿರುದ್ಧ ಅಮ್‌ ಅದ್ಮಿ ಪಕ್ಷದ ನರಸಿಂಹಲು ಗಂಭೀರ ಆರೋಪ

ಕನ್ನಡಪ್ರಭ ವಾರ್ತೆ ಪಾವಗಡ

ಸರ್ಕಾರಕ್ಕೆ ಶುಲ್ಕ ಪಾವಸಿಸಬೇಕು. ಬಿಲ್ಲು ಹಾಕಿ ಕೊಡುತ್ತೇನೆ ಎಂದು ಸುಳ್ಳು ಹೇಳಿ ಯಾವುದೇ ರಸೀದಿ ನೀಡದೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ವೈದ್ಯ ಹಾಗೂ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ್‌ಬಾಬು ಗರ್ಭೀಣಿಯೊಬ್ಬರಿಂದ ತಲಾ 300 ರು. ಸುಲಿಗೆ ಮಾಡುತ್ತಿದ್ದಾರೆ ಎಂದು ತಾಲೂಕು ಅಮ್‌ ಅದ್ಮಿ ಪಕ್ಷದ ಹಿರಿಯ ಮುಖಂಡ ಮೀನಗುಂಟೆನಹಳ್ಳಿ ನರಸಿಂಹಲು ಆರೋಪಿಸಿದ್ದಾರೆ.ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅತ್ಯಂತ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿ ರೋಗಿಗಳಿಗೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಇಲ್ಲಿನ ಅವ್ಯವಸ್ಥೆ ಕುರಿತು ಆನೇಕ ಬಾರಿ ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯಧಿಕಾರಿ ಡಿಎಚ್‌ಒ ಗಮನಕ್ಕೂ ತಂದರೂ ಪ್ರಯೋಜನವಾಗುತ್ತಿಲ್ಲ. ಬೆಂಗಳೂರು ಮೂಲದ ವೈದ್ಯ ಡಾ.ಗಣೇಶ್‌ ಬಾಬು ಎನ್ನುವರು ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದು, ಹೆರಿಗೆ ವಿಭಾಗದಲ್ಲಿರುವ ಈ ವೈದ್ಯನಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ನಿರ್ವಹಣೆಯ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ.

ಈತ, ಈ ಹಿಂದೆ ಕುಣಿಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದು, ಪ್ರಕರಣ ಎದುರಿಸುತ್ತಿದ್ದಾರೆ. ಇಂತಹವರಿಗೆ ಆಸ್ಪತ್ರೆಯ ಮೇಲುಸ್ತುವಾರಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ತಾಲೂಕಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸ್ಕ್ಯಾನಿಂಗ್ ವೈದ್ಯರಾದ ಡಾ.ಗಣೇಶ್ ಬಾಬು ಆಸ್ಪತ್ರೆಗೆ ಬಂದ ಗರ್ಭೀಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಹೆಸರಿನಲ್ಲಿ ತಲಾ ಒಬ್ಬರಿಗೆ 300 ತೆಗೆದುಕೊಳ್ಳುತ್ತಾರೆ. ಪ್ರತಿದಿನ 8ರಿಂದ 10 ಮಂದಿ ಗರ್ಭೀಣಿ ಸ್ರ್ರಿಯರು ಪರೀಕ್ಷೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗೆ ಬರುತ್ತಾರೆ. ಸರ್ಕಾರದ ಆರೋಗ್ಯ ಇಲಾಖೆಯ ನಿಯಮಸುನಾರ ಗರ್ಣೀಣಿ ಸ್ತ್ರಿಯರ ಸ್ಕ್ಕಾನಿಂಗ್‌ಗೆ ಯಾವುದು ಶುಲ್ಕ ಪಾವತಿಸುವಂತಿಲ್ಲ. ಎಲ್ಲ ಪರೀಕ್ಷೆಗಳು ಉಚಿತವಾಗಿವೆ. ಆದರೂ ಸರ್ಕಾರಕ್ಕೆ ಕಟ್ಟಬೇಕೆಂಬ ನೆಪವೊಡ್ಡಿ ರಸೀದಿ ಹಾಕಿ ಕೊಡುತ್ತೇನೆ ಎಂದು ಹೇಳಿ ತಲಾ ಗರ್ಭೀಣಿ ಮಹಿಳೆಯೊಬ್ಬರಿಂದ ತಲಾ 300ರುಗಳ ವಸೂಲಾತಿ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಮಂದಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ಅಳಲು ತೋಡಿಕೊಂಡಿರುವುದಾಗಿ ದೂರಿದರು.


ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಾಗಿನಿಂದಲೂ ಯಾವುದೇ ರೀತಿಯ ಔಷಧಿಯಾಗಲಿ ವೈದ್ಯ ಸೌಕರ್ಯಗಳಾಗಲಿ ಸಿಗುತ್ತಿಲ್ಲ. ಒಂದು 100 ಎಂಎಲ್‌ಎನ್‌ಎಸ್ ಬಾಟಲ್ ಕೂಡ ಹೊರಗಿನ ಖಾಸಗಿ ಔಷಧಿ ಅಂಗಡಿಯಿಂದ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ತಪರೀಕ್ಷೆಗೆ ಆರ್‌ಎಫ್‌ಟಿ, ಎಲ್ ಎಫ್ ಟಿ ಪರೀಕ್ಷೆಗಳಿಗೆ ಖಾಸಗಿ ಲ್ಯಾಬ್‌ಗಳಿಗೆ ಹೋಗಲು 1,500 ರಿಂದ 2,000 ವರೆಗೆ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಮುಂಚೆ ಇವೆಲ್ಲಾ ಸೌಕರ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು ರೋಗಿಗಳಿಗೆ ಅನುಕೂಲವಾಗುತ್ತಿತ್ತು ಎಂದರು.

ಈ ಬಗ್ಗೆ ಕ್ರಮಕ್ಕೆ ಡಿಎಚ್‌ಒ ಮೀನಾಮೇಷ ಹಾಕುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ. ಈ ಸಂಬಂಧ ದಾಖಲೆ ಸಮೇತ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸ್ಥಳೀಯ ಶಾಸಕರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.5ಪಿವಿಡಿ5

ತಾಲೂಕು ಎಎಪಿ ಮುಖಂಡ ಮೀನಗುಂಟೆನಹಳ್ಳಿ ನರಸಿಂಹಲು ಫೋಟೋ

5ಪಿವಿಡಿ6

ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ,ಗಣೇಶ್‌ಬಾಬು,