ಇಳುವರಿ ಆಧಾರದ ಮೇಲೆ ಪ್ರತಿಟನ್ ಕಬ್ಬಿಗೆ 3150 ರು. ದರ ನಿಗದಿ: ರಾಮಚಂದ್ರರಾವ್

| Published : Jul 29 2024, 12:49 AM IST

ಇಳುವರಿ ಆಧಾರದ ಮೇಲೆ ಪ್ರತಿಟನ್ ಕಬ್ಬಿಗೆ 3150 ರು. ದರ ನಿಗದಿ: ರಾಮಚಂದ್ರರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಕಟಾವಿನ ವೆಚ್ಚದಲ್ಲಿ ತನಿಕಬ್ಬಿಗೆ 400 ಹಾಗೂ ಕೂಳೆ ಕಬ್ಬಿಗೆ 450 ರು. ದರ ನಿಗದಿ,. 9.5 ರ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3150 ರು. ನಿಗದಿಪಡಿಸಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಕೆ ಆದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಲು ಕಾರ್ಖಾನೆ ಆಡಳಿತ ಮಂಡಳಿ ಬದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಸಕ್ತ ಸಾಲಿನಲ್ಲಿ 9.5 ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3150 ರು. ದರ ನಿಗದಿಪಡಿಸಲಾಗಿದೆ ಎಂದು ತಾಲೂಕಿನ ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಮಚಂದ್ರರಾವ್ ಹೇಳಿದರು.

ತಾಲೂಕಿನ ಕೊಪ್ಪದ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಕಬ್ಬುದರ ಹಾಗೂ ಹಣ ಪಾವತಿ ಕುರಿತಂತೆ ಚರ್ಚೆ ನಡೆಸಿ ಮಾತನಾಡಿ, 2024-25ನೇ ಸಾಲಿನಲ್ಲಿ ಕಾರ್ಖಾನೆ ವ್ಯಾಪ್ತಿಯ ಎಲ್ಲಾ ರೈತರ ಕಬ್ಬು ಅರೆಯುವ ಕಾರ್ಯ ಕೈಗೊಳ್ಳಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ ಎಂದರು.

ಕಬ್ಬು ಕಟಾವಿನ ವೆಚ್ಚದಲ್ಲಿ ತನಿಕಬ್ಬಿಗೆ 400 ಹಾಗೂ ಕೂಳೆ ಕಬ್ಬಿಗೆ 450 ರು. ದರ ನಿಗದಿ,. 9.5 ರ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3150 ರು. ನಿಗದಿಪಡಿಸಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಕೆ ಆದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಲು ಕಾರ್ಖಾನೆ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.

ಸಿನೀಯಾರಿಟಿ ಆಧಾರದ ಮೇಲೆ ರೈತರು ಕಬ್ಬು ಕಟಾವು ಮಾಡಬೇಕು. ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ಮಡ್ಡಿ ಗೊಬ್ಬರವನ್ನು ಟನ್ ಒಂದಕ್ಕೆ 125 ರು. ದರದಲ್ಲಿ ಮಾರಾಟ ಮಾಡಲಾಗುವುದು. ಆಸಕ್ತ ರೈತರು ಗೊಬ್ಬರವನ್ನು ಖರೀದಿ ಮಾಡಬಹುದು ಎಂದರು.

ಕಬ್ಬು ಕಟಾವಿನ ಕರಾರು ಪತ್ರದ ನಂತರವೇ ಕಾರ್ಖಾನೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ರೈತರು ಕಬ್ಬು ಸರಬರಾಜು ಮಾಡಬೇಕು. ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ತಿಂಗಳ ಒಂದು ಮತ್ತು 16ನೇ ತಾರೀಕಿನಂದು ಸಕ್ಕರೆ ವಿತರಣೆ ಮಾಡಲಾಗುವುದು ಎಂದರು.

ಸಭೆಯಲ್ಲಿ ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ. ಪ್ರಕಾಶ್, ಪ್ರಭುಲಿಂಗ, ಚಿಕ್ಕೋನಹಳ್ಳಿ ತಮ್ಮಯ್ಯ, ಕೃಷ್ಣೇಗೌಡ, ಕರಿಗೌಡ, ವೆಂಕಟೇಶ್, ಮೂಡ್ಯ ಚೆನ್ನೇಗೌಡ, ಹುರುಗಲವಾಡಿ ಉಮೇಶ, ಕಾರ್ಖಾನೆ ಕಬ್ಬು ವಿಭಾಗದ ವ್ಯವಸ್ಥಾಪಕ ಪರಿಮಳ ರಂಗನ್, ಮಾನವ ಸಂಪನ್ಮೂಲ ಅಧಿಕಾರಿ ಗೌರಿ ಪ್ರಕಾಶ್, ಸೋಮಶೇಖರ ಪಾಂಡು ಭಾಗವಹಿಸಿದ್ದರು.