ಸಾರಾಂಶ
ಸೋಮನಹಳ್ಳಿ ಗೇಟ್ ಬಳಿ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಸಲುವಾಗಿ ಸಾರ್ವಜನಿಕರು ಉಪಯೋಗಕ್ಕೆ ಬಳಸುವ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳಿಂದ ಬೇರೆ ಬೇರೆ ಕಂಪನಿಯ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡಿ, ಅದನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದರು.
ರಾಮನಗರ: ಸಿಲಿಂಡರ್ ಗಳನ್ನು ರೀಫಿಲಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದ 3 ಲಕ್ಷ ಮೌಲ್ಯದ 35 ಗ್ಯಾಸ್ ಸಿಲಿಂಡರ್ ಗಳನ್ನು ಕಗ್ಗಲೀಪುರ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸೋಮನಹಳ್ಳಿ ಗೇಟ್ ಬಳಿ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಸಲುವಾಗಿ ಸಾರ್ವಜನಿಕರು ಉಪಯೋಗಕ್ಕೆ ಬಳಸುವ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳಿಂದ ಬೇರೆ ಬೇರೆ ಕಂಪನಿಯ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡಿ, ಅದನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದರು. ಆ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಅದರಲ್ಲಿ 3 ಲಕ್ಷ ರುಪಾಯಿ ಮೌಲ್ಯದ ವಿವಿಧ ಕಂಪನಿಯ ಒಟ್ಟು 35 ಗ್ಯಾಸ್ ಸಿಲಿಂಡರ್ ಗಳನ್ನು ವಶ ಪಡಿಸಿಕೊಂಡರು. ಈ ಸಂಬಂಧ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.