ಸಾರಾಂಶ
ಮಾಗಡಿ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಮಾಗಡಿ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಭಾನುವಾರದಿಂದ ಮಂಗಳವಾರದವರೆಗೂ ಅದ್ಧೂರಿಯಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ನೆರವೇರುತ್ತಿದ್ದು ಸೋಮವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ನಿರ್ಮಾಲ್ಯ, ಫಲಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಬೆಳ್ಳಿ ಕವಚ ಧಾರಣೆ, ಬಂದಿದ್ದ ಭಕ್ತಗಳಿಗೆ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು, ಸಂಜೆ ಮಹಿಳಾ ಸಂಘದಿಂದ ವಿಶೇಷ ಭಕ್ತಿ ಗೀತೆ ಗಾಯನ, ರಥೋತ್ಸವ ಸೇವೆ ನಡೆಯಲಿದ್ದು ಮಂಗಳವಾರ ಉತ್ತರಾರಾಧನೆ ನಡೆಯಲಿದೆ. ಬೆಳಗ್ಗೆ 5 ಗಂಟೆಗೆ ನಿರ್ಮಾಲ್ಯ ಸೇವೆ, 8ಕ್ಕೆ ಪಂಚಾಮೃತ ಅಭಿಷೇಕ ವಿಶೇಷ ಹೂವಿನ ಅಲಂಕಾರ ಮಧ್ಯಾಹ್ನ ಪ್ರಸಾದ ವಿನಿಯೋಗ, ಸಂಜೆ ರಥೋತ್ಸವ ನೆರವೇರಲಿದೆ.ಆರಾಧನಾ ಮಹೋತ್ಸವದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎಚ್.ಎಂ.ಕೃಷ್ಣಮೂರ್ತಿ, ಮಠಾಧ್ಯಕ್ಷ ಹಿರಿಯಣ್ಣ, ಮ್ಯಾನೇಜರ್ ನಾಗರಾಜ್ ರಾವ್, ಗುಂಡಣ್ಣ ಗೋಪಾಲ್ ದೀಕ್ಷಿತ್, ಕಿರಣ್ ದೀಕ್ಷಿತ್, ನರಹರಿ, ನಾರಾಯಣಮೂರ್ತಿ ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್, ಚಕ್ರಬಾವಿ ಜಯಶ್ರೀ, ನಾಗರಾಜು ಗೌರಿ ಭಕ್ತರು ಭಾಗವಹಿಸಿದ್ದರು.