ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 36 ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳವಾರ ಅಕಾಡೆಮಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, 2024-25 ಮತ್ತು 2025-26ನೇ ಸಾಲಿನ 6 ‘ಗೌರವ ಪ್ರಶಸ್ತಿ’, 2023-24 ಹಾಗೂ 2024-25ನೇ ಸಾಲಿಗೆ 20 ‘ವರ್ಣಶ್ರೀ ಪ್ರಶಸ್ತಿ’ ಹಾಗೂ 2024-25ನೇ ಸಾಲಿನ ‘ವಾರ್ಷಿಕ ಕಲಾ ಬಹುಮಾನ’ಕ್ಕೆ 10 ಪ್ರಶಸ್ತಿ ಪುರಸ್ಕೃತರನ್ನು ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಗೌರವ ಪ್ರಶಸ್ತಿ ₹50,000 ನಗದು, ಫಲಕ ಮತ್ತು ವರ್ಣಶ್ರೀ ಹಾಗೂ ವಾರ್ಷಿಕ ಕಲಾ ಬಹುಮಾನಗಳು ತಲಾ ₹25,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ. ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರು ಹೊರತಾದ ಜಿಲ್ಲಾ ಕೇಂದ್ರದಲ್ಲಿ ಜರುಗಲಿದೆ. ದಿನಾಂಕ ನಿಗದಿಪಡಿಸಬೇಕಿದೆ ಎಂದರು.

ಬೆಂಗಳೂರಿನ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ, ಇಂದಿರಾ ನಗರ ಮತ್ತು ಮತ್ತೊಂದು ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಚಿತ್ರಕಲೆಗಳ ಮಾರಾಟ ಕೇಂದ್ರ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಎನ್.ನಮ್ರತಾ ಉಪಸ್ಥಿತರಿದ್ದರು.


ಕಲಾ ಬಹುಮಾನ ಪುರಸ್ಕೃತರ ಪಟ್ಟಿ:

ಅಶೋಕ ಬಿ ಮನಸೂರ -ಧಾರವಾಡ, ಸಂದೀಪ ಸಜ್ಜನಶೆಟ್ಟಿ -ಬೀದರ್, ಹರೀಶ್ ನಾಯ್ಕ- ಉಡುಪಿ, ಅಕ್ಷಯ ಭಟ್ -ಬೆಂಗಳೂರು, ಲೋಹಿತ್ ಪತ್ತಾರ -ಬೆಂಗಳೂರು, ನೂರ್ಜಾನ ಎಮ್ ದಫೇದಾರ -ಬಾಗಲಕೋಟೆ, ಜೀವನ್ ಸಾಲಿಯಾನ್ -ದಕ್ಷಿಣ ಕನ್ನಡ, ಜಲಜಾಕ್ಷಿ ಕುಲಕರ್ಣಿ -ಕಲಬುರಗಿ, ಮೀನಾಕ್ಷಿ- ಕಲಬುರಗಿ, ದುಂಡಪ್ಪಾ ಎಸ್ ಲೋಲಸೂರಿ -ಬೆಳಗಾವಿ.

ಗೌರವ ಪ್ರಶಸ್ತಿ ಪುರಸ್ಕೃತರು: ಬಾಬು ಜತ್ತಕರ್- ಬಾಗಲಕೋಟೆ, ಎಂ.ಜಿ.ದೊಡ್ಡಮನಿ- ಕಲಬುರಗಿ, ಕೆ.ಸಿ.ಎಸ್.ಪ್ರಸನ್ನ- ತುಮಕೂರು, ಬಿ.ಎಸ್.ದೇಸಾಯಿ- ಹಾಸನ, ಡಾ। ಶಶಿಕಲಾ ಹೂಗಾರ್- ವಿಜಯಪುರ, ಸಿ.ಚಿಕ್ಕಣ್ಣ- ಮೈಸೂರು.

ವರ್ಣಶ್ರೀ ಪ್ರಶಸ್ತಿ ಪುರಸ್ಕೃತರು: ವಿಜಯ ಕಿರಸೂರ- ಗದಗ, ರವಿ ಗುಣಗ- ಶಿರಸಿ, ಕುಮಾರ ಕಾಟೇನಹಳ್ಳಿ- ಹಾವೇರಿ, ದಯಾನಂದ ಕೆ. ಕಾಮಕರ್- ಧಾರವಾಡ, ಸರೋಜ ಮುಂಡೇವಾಡಿ- ವಿಜಯಪುರ, ಜಿ. ಎಸ್. ಭವಾನಿ- ಕೊಡಗು, ರಾಘವೇಂದ್ರ ನಾಯ್ಕ- ಉಡುಪಿ, ಶಿವಕುಮಾರ್ ಎಚ್- ಮಂಡ್ಯ, ಮೋಹನ್ ಕುಮಾರ್ ಬಿ.ಪಿ- ಮಂಗಳೂರು, ಮಹದೇವ ಎಚ್- ಚಾಮರಾಜನಗರ, ಮೇಘನಾಥ ಅಬ್ರಹಂ ಬೆಳ್ಳಿ- ಯಾದಗಿರಿ ಹೇಮರೆಡ್ಡಿ ಎನ್- ರಾಯಚೂರು, ಡಾ। ವೈಶಾಲಿಬಾಯಿ ಕಾಂಬಳೆ- ಬೀದರ್, ತಿರುಪತಿ ಶಿವನಗುತ್ತಿ- ಕೊಪ್ಪಳ, ಎ.ಮಹಮದ್ ರಫಿ- ಬಳ್ಳಾರಿ, ಉದಯ್ ಕುಮಾರ್ ಡಿ. ಜೈನ್- ದಾವಣಗೆರೆ, ದಿನೇಶ್ ಬಿ- ಚಿತ್ರದುರ್ಗ, ಎಸ್.ಎಫ್.ಹುಸೇನಿ- ಬೆಂಗಳೂರು, ಗಂಗಾಧರ ಮೂರ್ತಿ- ರಾಮನಗರ, ಪೂರ್ಣಿಮ ಯಲ್ಲಾಪುರಕರ್- ಬೆಂಗಳೂರು.