- ಅಮೆರಿಕದ ಚೆಕ್, ಡಾಲರ್ ಸಹ ಪತ್ತೆ
---ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು ಒಟ್ಟು 37,99,495 ರು.ಗಳು ಸಂಗ್ರಹವಾಗಿದೆ.ಬೆಳಿಗ್ಗೆಯಿಂದಲೇ ಹುಂಡಿ ಹಣವನ್ನು ದೇಗುಲದ ಕಂದಾಯ ಇಲಾಖೆ, ದೇಗುಲದ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಸೋಮವಾರ ಸಂಜೆವರೆಗೂ ಹುಂಡಿಯ ಹಣ ಎಣಿಕೆ ಮಾಡಲಾಯಿತು. ನೋಟುಗಳ ರೂಪದಲ್ಲಿ 35,92,605 ರು. ನಾಣ್ಯಗಳ ರೂಪದಲ್ಲಿ 2,06,890 ರು.ಗಳು ಸಂಗ್ರಹವಾಗಿದೆ.
ಹುಂಡಿಗೆ 100 ಡಾಲರ್ ಅಮೆರಿಕದ ಚೆಕ್:ಈ ಬಾರಿಯ ಹುಂಡಿ ಹಣ ಎಣಿಕೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಕ್ತರೊಬ್ಬರು 100 ಡಾಲರ್ (9100 ರು.) ಚೆಕ್ ಹುಂಡಿಗೆ ಹಾಕಿದ್ದಾರೆ. ಇದರೊಂದಿಗೆ ಅಮಾನ್ಯಗೊಂಡ 2,000 ಮುಖಬೆಲೆಯ 3 ನೋಟುಗಳು ದೊರೆತಿವೆ. ಅಲ್ಲದೆ ಕೆಲವರು ದೇವರಿಗೆ ತಮ್ಮ ಹರಕೆಯನ್ನು ಅರಿಶಿನ, ಕುಂಕುಮ ಸವರಿದ ಪೇಪರ್‌ನಲ್ಲಿ ಬರೆದು ಹುಂಡಿಗೆ ಹಾಕಿದ್ದಾರೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಮಾಹಿತಿ ನೀಡಿದರು.ಈ ವೇಳೆ ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಸದಸ್ಯರಾದ ಸಿದ್ದರಾಜು, ವೆಂಕಟರಾಮು, ನಾರಾಯಣಸ್ವಾಮಿ, ಕೇತಮ್ಮ, ಸುರೇಶ್, ಪಾರುಪತ್ತೇದಾರ ರಾಜು, ರಾಜಸ್ವ ನಿರೀಕ್ಷಕ ಯದುಗಿರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ವೀರಭದ್ರಸ್ವಾಮಿ, ಶೇಷಾದ್ರಿ, ಅರ್ಚಕರಾದ ರವಿಕುಮಾರ್, ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.