ಸಾರಾಂಶ
ಪಾಂಡವಪುರ ಪಟ್ಟಣದ ಸುಬ್ರಹ್ಮಣ್ಯ ಬಡಾವಣೆಯ ರಾಮ ಮಂದಿರದಲ್ಲಿ ತ್ಯಾಗರಾಜ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶೇಷ ಅಭಿಷೇಕ ಸಲ್ಲಿಸಿದರು. ನಂತರ ವಿವಿಧ ಕಲಾತಂಡಗಳ ಜತೆಯಲ್ಲಿ ತ್ಯಾಗರಾಜರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್‍ಯಕ್ರಮಕ್ಕೆ ತೆರಳಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತ್ಯಾಗರಾಜರ ಆರಾಧನಾ ಸೇವಾ ಸಮಿತಿಯಿಂದ ಮಂಗಳವಾರ 3ನೇ ವರ್ಷದ ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ಸಮುದಾಯದ ಮುಖಂಡರು ವಿಜೃಂಭಣೆಯಿಂದ ಆಚರಿಸಿದರು.ಪಟ್ಟಣದ ಸುಬ್ರಹ್ಮಣ್ಯ ಬಡಾವಣೆಯ ರಾಮ ಮಂದಿರದಲ್ಲಿ ತ್ಯಾಗರಾಜ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶೇಷ ಅಭಿಷೇಕ ಸಲ್ಲಿಸಿದರು. ನಂತರ ವಿವಿಧ ಕಲಾತಂಡಗಳ ಜತೆಯಲ್ಲಿ ತ್ಯಾಗರಾಜರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್‍ಯಕ್ರಮಕ್ಕೆ ತೆರಳಿದರು.
ನಂತರ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಮೈಸೂರಿನ ವಿದುಷಿ ಗಾಯಿತ್ರಿ ಸತ್ಯನಾರಾಯಣ್ ಅವರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಸಿಕೊಟ್ಟರು. ಬಳಿಕ ಅಂತಾರಾಷ್ಟ್ರೀಯ ಕಲಾವಿಧ ಶಿವರಾಮ್‌ಗಣೇಶ್, ಖ್ಯಾತ ಕಲಾವಿಧ ಹಾರೋಹಳ್ಳಿಯ ಹರೀಶ್‌ಪಾಂಡವ್, ಬೆಳ್ಳಾಳೆ ಪಿ.ಲೋಕೇಶ್, ಎಂ.ಆರ್.ಗಣೇಶ್ ಅವರಿಂದ ವಿಶೇಷ ಕಚೇರಿ ನಡೆಸಿಕೊಟ್ಟರು.ಆರಾಧನಾ ಸಮಿತಿ ರಘು ಮಾತನಾಡಿ, ಪಟ್ಟಣದಲ್ಲಿ ವಿಜೃಂಭಣೆಯಿಂದ ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ನಡೆಸಿದ್ದೇವೆ. ಸಮುದಾಯದ ಬಂಧುಗಳು ಕಾರ್‍ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇಂತಹ ಮಹಾನ್ ಪುರುಷರ ತತ್ವ ಸಿದ್ದಾಂತಗಳು, ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಬಳಿಕ ಸಮುದಾಯದ ಮುಖಂಡರಿಗೆ ಊಟದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಸಮಾರಂಭದಲ್ಲಿ ಸಮಿತಿಯ ರಘು, ತಮ್ಮಣ್ಣ, ತೋಪಯ್ಯ, ಟಿ.ಕುಮಾರ್, ತಿಮ್ಮರಾಜು, ಪ್ರತೀಸ್, ಸ್ವಾಮಿ, ಕುಮಾರ್, ಮಂಜು, ಚಂದು, ಬೆಟ್ಟಪ್ಪ, ಹನುಮ, ಶಿವಕುಮಾರ್, ನಾಗೇಂದ್ರ, ಬಸವರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.