ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯಲ್ಲಿ 4.20 ಕೋಟಿ ಅನುದಾನ ಬಳಕೆ

| Published : Oct 17 2025, 01:00 AM IST

ಸಾರಾಂಶ

ಹಾರೋಹಳ್ಳಿ: ತಾಲೂಕಿನ ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯಲ್ಲಿ 4.20 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸಿದರು.

ಹಾರೋಹಳ್ಳಿ: ತಾಲೂಕಿನ ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯಲ್ಲಿ 4.20 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸಿದರು.

ಭದ್ರೇಗೌಡನದೊಡ್ಡಿ, ದೊಡ್ಡಕಲ್‌ಬಾಳು, ಸಿದ್ದೇನಹಳ್ಳಿ, ಪಿಚ್ಚನಕೆರೆ, ದೊಂಬರದೊಡ್ಡಿ, ಗೊಲ್ಲಹಳ್ಳಿ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ, ರುದ್ರಭೂಮಿ, ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಇಕ್ಬಾಲ್ ಹುಸೇನ್, ಕಾವೇರಿ ನಿಗಮದಿಂದ 2.80 ಕೋಟಿ, ಕೆಆರ್‌ಡಿಎಲ್‌ನಿಂದ 15 ಲಕ್ಷ, ಅಲ್ಪಸಂಖ್ಯಾತರ ಇಲಾಖೆಯಿಂದ 30 ಲಕ್ಷ, ಎಸ್‌ಟಿಪಿ ಅನುದಾನದಲ್ಲಿ 50 ಲಕ್ಷ, ತಾಲೂಕು-ಜಿಪಂ ಅನುದಾನದಿಂದ 50 ಲಕ್ಷ ರು.ಅನುದಾನ ಮಂಜೂರಾಗಿದೆ. ಈ ಅನುದಾನವನ್ನು ಬರೀ ಕೊಟ್ಟಗಾಳು ಗ್ರಾಪಂ ವ್ಯಾಪ್ತಿ ಅಭಿವೃದ್ಧಿಗೆ ಮಾತ್ರ ಬಳಸಲಾಗಿದೆ ಎಂದರು.

ಕಳೆದ 20 ವರ್ಷಗಳಿಂದ ಹಾರೋಹಳ್ಳಿ, ಮರಳವಾಡಿ ಭಾಗದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಜನರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು, ನಾನು ಶಾಸಕನಾದ ನಂತರ ತಮ್ಮ ಋಣ ತೀತಿಸಲು ಹಂತಹಂತವಾಗಿ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ತಂದು ಅಭಿವೃದ್ಧಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್, ಬೊಮುಲ್ ನಿರ್ದೇಶಕ ಹರೀಶ್, ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಕುಲಕರ್ಣಿ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಕಾವೇರಿ ನಿಗಮ ಅಧಿಕಾರಿ ಇಂಪು ಕುಮಾರಿ, ಗ್ರಾಪಂ ಅಧ್ಯಕ್ಷ ಬಸವರಾಜು, ಪಿಡಿಒ ರಂಗೇಗೌಡ, ಮುಖಂಡರಾದ ಪರಮೇಶ್, ಬಾಲಾಜಿ, ಪುಟ್ಟಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

16ಕೆಆರ್ ಎಂಎನ್ 2.ಜೆಪಿಜಿ

ಹಾರೋಹಳ್ಳಿ ತಾಲೂಕು ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸಿದರು.