ಆದ್ಯತೆ ಮೇರೆಗೆ ಇನ್ನೂ 4 ಸರ್ಕಾರಿ ಬಸ್‌ ಸೇವೆ: ಶಾಸಕ ಭರವಸೆ

| Published : Jun 15 2024, 01:06 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸಲು ಸರ್ಕಾರಿ ಬಸ್‌ ಸೇವೆ ಕಲ್ಪಿಸಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ನ್ಯಾಮತಿ ಪಟ್ಟಣದಲ್ಲಿ ಹೇಳಿದ್ದಾರೆ.

ನ್ಯಾಮತಿ: ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸಲು ಸರ್ಕಾರಿ ಬಸ್‌ ಸೇವೆ ಕಲ್ಪಿಸಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಮಹಂತೇಶ್ವರ ಬಸ್‌ ಸ್ಟಾಪ್‌ನಲ್ಲಿ ಶುಕ್ರವಾರ ಬೆಳಗ್ಗೆ ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪುವ ಸರ್ಕಾರಿ ಬಸ್‌ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊನ್ನಾಳಿಯಿಂದ ಪ್ರತಿದಿನ ಬೆಳಗ್ಗೆ 8-30ಕ್ಕೆ ಬಿಟ್ಟು 8-45ಕ್ಕೆ ನ್ಯಾಮತಿ, ಸವಳಂಗ-9.10ಕ್ಕೆ, ಶಿವಮೊಗ್ಗ ಬಸ್‌ ಸ್ಟಾಂಡ್‌ಗೆ 9-45ಕ್ಕೆ ತಲುಪುವುದು. ಸಂಜೆ ಶಿವಮೊಗ್ಗದಿಂದ 7 ಗಂಟೆಗೆ ಹೊರಟು ನ್ಯಾಮತಿ 7-45ಕ್ಕೆ, ಹೊನ್ನಾಳಿ 8.15ಕ್ಕೆ ತಲುಪುವುದು. ಮುಂದಿನ ದಿನಗಳಲ್ಲಿ ಇನ್ನೂ 4 ಸರ್ಕಾರಿ ಬಸ್‌ಗಳ ಸೇವೆ ಆದ್ಯತೆ ಮೇರೆಗೆ ಕಲ್ಪಿಸುವ ಭರವಸೆ ನೀಡಿದರು.

ಹೊನ್ನಾಳಿ ಡಿಪೋ ಮ್ಯಾನೇಜರ್‌ ಮಹೇಶ್ವರಪ್ಪ, ಜಿ.ಶಿವಪ್ಪ, ಜಿ.ಲೋಕಪ್ಪ, ಎನ್‌.ಜೆ.ವಾಗೀಶ್‌, ಗಾರೆ ಷಣ್ಮುಖಪ್ಪ, ರೆಡ್ಡಿ ಉಮೇಶ್‌, ರೆಡ್ಡಿ ಸುರೇಶ್‌, ಎಂ.ಮಿಥನ್‌, ಹೊಸಮನೆ ಮಲ್ಲಿಕಾರ್ಜುನಪ್ಪ, ಎಂ.ಕರಿಬಸಪ್ಪ, ಸಿ.ಸಂಜು, ಭಾರತೀ ಚಂದ್ರಶೇಖರ್‌, ವನಜಾಕ್ಷಮ್ಮ, ಸುನಿತಾ, ಗೀತಮ್ಮ, ಕಾವ್ಯ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ಇದ್ದರು.