ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಜನ ಕಳ್ಳರನ್ನು ಜಮಖಂಡಿ ಪೋಲಿಸರು ಬಂಧಿಸಿದ್ದಾರೆ. ಕಳೆದ ವರ್ಷ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ದೋಚಿದ್ದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕರೆಪ್ಪ ತಳವಾರ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತರಿಂದ ₹ 7 ಲಕ್ಷ ಮೌಲ್ಯದ 10 ತೊಲೆ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೋರ್ವನಿಂದ ಚಿನ್ನದ ಆಭರಣ ದೋಚಿದ್ದ ಮೂವರನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ:
ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಜನ ಕಳ್ಳರನ್ನು ಜಮಖಂಡಿ ಪೋಲಿಸರು ಬಂಧಿಸಿದ್ದಾರೆ. ಕಳೆದ ವರ್ಷ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ದೋಚಿದ್ದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕರೆಪ್ಪ ತಳವಾರ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತರಿಂದ ₹ 7 ಲಕ್ಷ ಮೌಲ್ಯದ 10 ತೊಲೆ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೋರ್ವನಿಂದ ಚಿನ್ನದ ಆಭರಣ ದೋಚಿದ್ದ ಮೂವರನ್ನು ಬಂಧಿಸಲಾಗಿದೆ. ಸಿದ್ದಾಪೂರದ ಕಾಲುವೆಯ ಬಳಿ ವ್ಯಕ್ತಿಯೋರ್ವನ ಸುಲಿಗೆ ನಡಿಸಿದ ಆರೋಪದ ಮೇಲೆ ಹುಣಸಿಕಟ್ಟಿ ಗ್ರಾಮದ ನಾಗಪ್ಪ ಹೆಗಡೆ, ನಾಗಪ್ಪ ಗೊಂಗಗೋಳ ಹಾಗೂ ರಾಜು ಹೆಗ್ಗಣ್ಣವರ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ₹ 9 ಸಾವಿರ ನಗದು, 3 ಮೊಬೈಲ್ ಪೋನ್, ಎರಡು ಬೈಕ್ ವಶಕ್ಕೆ ಪಡೆದು ಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಮರನಾಥ ರೆಡ್ಡಿ, ಡಿಎಸ್‌ಪಿ ಶಾಂತವೀರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಡಿ.ಮಡ್ಡಿ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪಿಎಸ್ಐ ಎನ್.ಆರ್.ಕಿಲಾರೆ, ಕ್ರೈಮ್ ವಿಭಾಗದ ಪಿಎಸ್‌ಐ ಜಿ.ಎಚ್.ಕುಪ್ಪಿ, ಸಿಬ್ಬಂದಿಗಳಾದ ಎಚ್.ಎಸ್.ಕೋಟಿ, ಘಾಟಗೆ, ಹನಗಂಡಿ, ಕೆರೂರ, ಬಾಹುಬಲಿ, ಸಿ.ಐ.ಪರೀಟ, ತುಪ್ಪದ ಮತ್ತು ಮೇಟಿ ಮುಂತಾದವರು ಕಾರ್ಯಾಚರಣೆ ನಡೆಸಿದ್ದರು. ಎಸ್‌ಪಿ ಅವರು ಪೊಲೀಸ್ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.