ಪ್ರಥಮ ಲಮಾಣಿ ಎಂದಿನಂತೆ ಶಾಲೆ ಮುಗಿಸಿ ತನ್ನ ಗ್ರಾಮ ದೊಡ್ಡೂರು ತಾಂಡಾಕ್ಕೆ ಶಾಲಾ ಬಸ್‌ನಲ್ಲಿ ವಾಪಸ್ ಹೋಗುತ್ತಿದ್ದಾಗ ಬಾಗಿಲು ಬಳಿ ಇದ್ದ ಬಾಲಕ ಆಯ ತಪ್ಪಿ ಬಿದ್ದಿದ್ದಾನೆ. ಬಾಲಕನ ತಲೆಯ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಲಕ್ಷ್ಮೇಶ್ವರ: ಚಲಿಸುತ್ತಿದ್ದ ಶಾಲಾ ಬಸ್ ನಿಂದ ಬಿದ್ದು 4 ವರ್ಷದ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ಸಮೀಪದ ದೊಡ್ಡೂರು ತಾಂಡಾದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ದೊಡ್ಡೂರು ತಾಂಡಾದ ಪ್ರಥಮ ಅರುಣ ಲಮಾಣಿ(4) ಎಂಬಾತನೇ ಮೃತಪಟ್ಟ ವಿದ್ಯಾರ್ಥಿ. ಈತ ಸಮೀಪದ ಶಿಗ್ಲಿಯ ಲಿಟಲ್ ಹಾರ್ಟ್ ಇಂಟರ್ ನ್ಯಾಶನಲ್ ಶಾಲೆಯ ಎಲ್‌ಕೆಜಿ ಓದುತ್ತಿದ್ದ. ಪ್ರಥಮ ಲಮಾಣಿ ಎಂದಿನಂತೆ ಶಾಲೆ ಮುಗಿಸಿ ತನ್ನ ಗ್ರಾಮ ದೊಡ್ಡೂರು ತಾಂಡಾಕ್ಕೆ ಶಾಲಾ ಬಸ್‌ನಲ್ಲಿ ವಾಪಸ್ ಹೋಗುತ್ತಿದ್ದಾಗ ಬಾಗಿಲು ಬಳಿ ಇದ್ದ ಬಾಲಕ ಆಯ ತಪ್ಪಿ ಬಿದ್ದಿದ್ದಾನೆ. ಬಾಲಕನ ತಲೆಯ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಾಲಕನ ತಲೆಯ ಮೇಲೆ ಬಸ್ಸು ಹರಿದು ಮೃತಪಟ್ಟ ಬಾಲಕನನ್ನು ಬಸ್ಸಿನ ಚಾಲಕ ಹಾಗೂ ಕ್ಲೀನರ್ ಸೇರಿ ಶಾಲಾ ವಾಹನದಲ್ಲಿ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಬಾಲಕನ ಪಾಲಕರು ಪುಟ್ಟ ಕಂದನನ್ನು ಕಳೆದುಕೊಂಡು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

ಲಕ್ಷ್ಮೇಶ್ವರ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.ಪಟ್ಟಣದ ಸೋಮಪ್ಪ ಬಸವಣ್ಣೆಪ್ಪ ಸವಣೂರ(70) ಎಂಬವರೇ ಮೃತಪಟ್ಟ ರೈತ. ಇವರು ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದರಿಂದ ಮನನೊಂದು ಬ್ಯಾಂಕಿನಲ್ಲಿನ ಬೆಳೆಸಾಲ ತೀರಿಸುವುದೇ ಹೇಗೆ ಎಂಬ ಚಿಂತೆಯಲ್ಲಿ ತಮ್ಮ ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.