ಸಾರಾಂಶ
ಕುದೂರು: ಈ ಬಾರಿಯ ಆಯವ್ಯಯ ಮಂಡನೆಯಲ್ಲಿ 40 ಕೋಟಿ ರು. ಹಣವನ್ನು ಮಾಗಡಿ ಆಸ್ಪತ್ರೆಯ ಉನ್ನತೀಕರಣಕ್ಕೆ ಮೀಸಲಿರಿಸಲು ತೀರ್ಮಾನಿಸಿದ್ದೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಕೆ.ಆರ್.ಎಸ್.ಎಜುಕೇಷನ್ ರೂರಲ್ ಡೆವಲ್‌ಪ್‌ಮೆಂಟ್ ಟ್ರಸ್ಟ್ (ಯು.ಎಸ್.ಎ) ವತಿಯಿಂದ ಏರ್ಪಡಿಸಿದ್ದ ನೂತನ ಕಟ್ಟಡಗಳ ಲೋಕಾರ್ಪಣೆ ಮತ್ತು ಕರುಣಾಳು ಎಂಬ ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ಕುದೂರು ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಕೂಡಾ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಜೊತೆ ಮಾತನಾಡುತ್ತೇನೆ. ಪ್ರತಿಭೆ ಎನ್ನೋದು ಯಾರ ಸ್ವತ್ತು ಅಲ್ಲ. ಅದು ಜಾತಿ ಧರ್ಮ ಲಿಂಗವನ್ನು ಮೀರಿದ್ದು ಅಂತಹ ಒಂದು ಪ್ರತಿಭೆ ಶಾರದಾ ರಾಜಣ್ಣವರದ್ದಾಗಿತ್ತು ಎಂದು ತಿಳಿಸಿದರು.ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ತಾನು ಹುಟ್ಟಿದ ಊರು, ಓದಿದ ಗ್ರಾಮ ಎರಡನ್ನೂ ಮರೆಯದೆ ಒಂದು ಪುಟ್ಟ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ಪ್ರೌಢಶಾಲೆ, ಪಶುವೈದ್ಯಶಾಲೆ ಇಂತಹವುಗಳನ್ನು ಕಟ್ಟಲು ಹಿರಿದಾದ ಮನಸ್ಥಿತಿ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಇಂತಹ ನಿಸ್ವಾರ್ಥ ದಾನಿಗಳ ಹೆಸರನ್ನು ಸುಗ್ಗನಹಳ್ಳಿಯ ಮುಖ್ಯವೃತ್ತಕ್ಕೆ ಇಡಲಾಗುವುದು ಮತ್ತು ಅವರದ್ದೊಂದು ಪುಥ್ಥಳಿಯನ್ನು ನಿರ್ಮಾಣ ಮಾಡಲಾಗುವುದು. ಸುಗ್ಗನಹಳ್ಳಿ ಗ್ರಾಮಕ್ಕೆ ಕೆಪಿಎಸ್ ಶಾಲೆಯನ್ನು ಮಂಜೂರು ಮಾಡಿಸಿ ಆ ಶಾಲೆಗೂ ಶಾರದಾ ರಾಜಣ್ಣನವರ ಹೆಸರನ್ನು ಇಡಲಾಗುವುದು ಎಂದು ಘೋಷಣೆ ಮಾಡಿದರು.
ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಇಂದು ಹಳ್ಳಿಗಳನ್ನು ತೊರೆದು ಪಟ್ಟಣವನ್ನು ಸೇರಿಕೊಂಡು ತಾವು ಬಂದ ದಾರಿಯನ್ನು ಮರೆತು ಸ್ವಾರ್ಥ ಬದುಕನ್ನು ಮಾಡುತ್ತಿರುವ ದಿನಮಾನಸಗಳಲ್ಲಿ ಶಾರದಾ ರಾಜಣ್ಣರವರು ತಮ್ಮ ದಾರಿಯನ್ನು ಮರೆಯದೆ ಉಪಕರಿಸಿದರು. ಅವರ ಉಪಕಾರವನ್ನು ಜನರು ಮರೆಯಬಾರದು ಎಂದರು.ಬಿಜೆಪಿ ದಳದವರು ಭಾವನಾತ್ಮಕವಾಗಿ ರಾಜಕೀಯ ಮಾಡುತ್ತಾರೆ, ಕಾಂಗ್ರೆಸಿಗರಾದ ನಾವುಗಳು ಭರವಸೆಯ ರಾಜಕೀಯ ಮಾಡುತ್ತೇವೆ. ಶಕ್ತಿ ಯೋಜನೆಯ ಅಡಿಯಲ್ಲಿ ಇದುವರೆವಿಗೂ 383 ಕೋಟಿ ಮಹಿಳೆಯವರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಸರ್ಕಾರ ಇದಕ್ಕಾಗಿ ಇದುವರೆಗೂ 9286 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಗೃಹಲಕ್ಷ್ಮಿ ಯೋಜನೆಯಿಂದ 1.22 ಕೋಟಿ ಮಹಿಳೆಯರಿಗೆ 35180 ಕೋಟಿ ರು.ಗಳನ್ನು ಸರ್ಕಾರ ನೀಡಿದೆ. 1.63 ಕೋಟಿ ಮನೆಗೆ ಉಚಿತ ಕರೆಂಟ್ ನೀಡಿ 12,889 ಕೋಟಿ ರು.ಗಳನ್ನು ಸರ್ಕಾರ ನೀಡಿದೆ. 2.29 ಯುವಕರಿಗೆ 212 ಕೋಟಿ ರು. ನೀಡಿ ಗ್ಯಾರಂಟಿಗಳಿಂದ ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಶಾರದಾರಾಜಣ್ಣರನ್ನು ಕುರಿತಾದ "ಕರುಣಾಳು " ಕೃತಿಯನ್ನು ರಚಿಸಿದ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಸ್ವಾರ್ಥಿ, ಕಪಟಿಗಳು ಹೆಚ್ಚಾಗುತ್ತಿರುವ ದಿನದಲ್ಲಿ ಮಾತೃ ಹೃದಯದ ತಾಯಂದಿರ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಅವಶ್ಯಕತೆ ಇದೆ. ಸುಗ್ಗನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ಇರೋದು ನಿಜಕ್ಕೂ ಅಭಿನಂದನಾರ್ಹ ವಿಷಯ ಎಂದು ಹೇಳಿದರು.ದಾನಿ ಬೆಟ್ಟಯ್ಯರಾಜಣ್ಣ ಮಾತನಾಡಿ, ಸುಗ್ಗನಹಳ್ಳಿ ಗ್ರಾಮಕ್ಕೆ ಇಂಗ್ಲೀಷ್ ಮೀಡಿಯಂ ಶಾಲೆಯನ್ನು ಮಂಜೂರು ಮಾಡಿಕೊಟ್ಟರೆ ಅದಕ್ಕೆ ಬೇಕಾದ ಎಲ್ಲಾ ಸೌಕರ್‍ಯಗಳನ್ನು ಮಡಿಕೊಡತ್ತೇನೆ ಎಂದು ತಿಳಿಸಿದರು.
ಪತ್ರಕರ್ತ ತ್ಯಾಗರಾಜ್ ಮಾತನಾಡಿ, ಶಾರದರಾಜಣ್ಣ ಅಮೇರಿಕಾದಲ್ಲಿ ಕ್ಯಾನ್ಸರ್ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದಾಗ ತಮ್ಮ ಯಜಮಾನರನ್ನು ಕರೆದು ನಮ್ಮ ಹುಟ್ಟೂರಿಗೆ ಇನ್ನೊಂದಿಷ್ಟು ಕೆಲಸ ಮಾಡಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ನೀವು ಆ ಕೆಲಸಗಳನ್ನು ಮಾಡಬೇಕು ಮತ್ತು ಆ ಊರಿನ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಬೇಕು ಎಂದು ಹೇಳಿ ಜೀವತ್ಯಾಗ ಮಾಡಿದ ಮಹಾತಾಯಿಯಾಗಿದ್ದರು ಎಂದು ಹೇಳಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ವಸತಿಗೃಹಗಳು, ಪ್ರೌಢಶಾಲೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬಿ.ಕೆ.ರವಿ, ಡಿಹೆಚ್‌ಒ ನಿರಂಜನ್, ತಹಸೀಲ್ದಾರ್ ಶರತ್‌ಕುಮಾರ್, ಶಶಾಂಕ್‌ರೇವಣ್ಣ, ಮಂಜೇಶ್‌ಕುಮಾರ್, ಯತೀಶ್, ಚಂದ್ರಶೇಖರ್, ಶಿಕ್ಷಣ ಇಲಾಖೆಯ ಗಂಗಾಧರ್, ಸಾರಂಗಪಾಣಿ, ಕಣನೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಮಮತಕಿರಣ್. ಮಾಜಿ ಅಧ್ಯಕ್ಷ ಜಗದೀಶ್, ರಮೇಶ್, ಕವಿತಾರಾಜಣ್ಣ, ತಿಪ್ಪಸಂದ್ರ ವೆಂಕಟೇಶ್ ಹಾಜರಿದ್ದರು.12ಕೆಆರ್ ಎಂಎನ್ 5,6.ಜೆಪಿಜಿ
5.ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಕೆ.ಆರ್.ಎಸ್.ಎಜುಕೇಷನ್ ರೂರಲ್ ಡೆವಲ್‌ಪ್‌ಮೆಂಟ್ ಟ್ರಸ್ಟ್ (ಯು.ಎಸ್.ಎ) ವತಿಯಿಂದ ಏರ್ಪಡಿಸಿದ್ದ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್‍ಯಕ್ರಮವನ್ನು ಸಚಿವ ದಿನೇಶ್‌ಗುಂಡೂರಾವ್ ಉದ್ಘಾಟಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ,ರೇವಣ್ಣ ಹಾಜರಿದ್ದರು.6.ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಕೆ.ಆರ್.ಎಸ್.ಎಜುಕೇಷನ್ ರೂರಲ್ ಡೆವಲ್‌ಪ್‌ಮೆಂಟ್ ಟ್ರಸ್ಟ್ (ಯು.ಎಸ್.ಎ) ವತಿಯಿಂದ ಏರ್ಪಡಿಸಿದ್ದ ಕಾರ್‍ಯಕ್ರಮದಲ್ಲಿ ಜಾಣಗೆರೆ ವೆಂಕಟರಾಮಯ್ಯರವರ ಕರುಣಾಳು ಎಂಬ ಕೃತಿಯನ್ನು ಸಚಿವ ದಿನೇಶ್ ಗುಂಡೂರಾವ್, ಶಾಸಕ ಎಚ್.ಸಿ.ಬಾಲಕೃಷ್ಣ. ಎಚ್.ಎಂ.ರೇವಣ್ಣ, ಬೆಟ್ಟಯ್ಯರಾಜಣ್ಣ ಬಿಡುಗಡೆಗೊಳಿಸಿದರು.